Sun,Jul26,2026
ಕನ್ನಡ / English

ಮರ್ಯಾದಾ ಹತ್ಯೆ: ಪ್ರೇಮಿಗಳನ್ನ ಒಂದು ಮಾಡ್ತೀವಿ ಎಂದು ಕರೆದು ಹತ್ಯೆ | JANATA NEWS

18 Oct 2022

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ. ಯುವತಿಯ ತಂದೆ ಹಾಗೂ ಮಾವಂದಿರು ಪ್ರೇಮಿಗಳಿಬ್ಬರನ್ನು ಕೊಲೆಗೈದು ಕೃಷ್ಣಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಇಬ್ಬರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗ್ರಾಮದ ವಿಶ್ವನಾಥ್ ನೆಲಗಿ(24) ಹಾಗೂ ರಾಜೇಶ್ವರಿ(18) ಹತ್ಯೆಯಾದ ಪ್ರೇಮಿಗಳು. ಸುಮಾರು 4-5 ವರ್ಷಗಳಿಂದ ವಿಶ್ವನಾಥ್ ಹಾಗೂ ರಾಜೇಶ್ವರಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

ಈ ವಿಚಾರ ತಿಳಿದ ರಾಜೇಶ್ವರಿ ಪೋಷಕರು, ಅಪ್ರಾಪ್ತ ಮಗಳ ಪ್ರೀತಿಗೆ ಅಡ್ಡಿಪಡಿಸಿ ಬುದ್ಧಿ ಮಾತು ಹೇಳಿದ್ದರು. ವಿಶ್ವನಾಥ್‌ನ ಮನೆಯವರು ಆತನನ್ನು ಕೂಲಿ ಕೆಲಸಕ್ಕೆಂದು ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು.

ಆದರೆ ರಾಜೇಶ್ವರಿಯ ತಂದೆ ಪರಸಪ್ಪ ಕರಡಿ ಇಬ್ಬರನ್ನೂ ಒಂದು ಮಾಡಿಸುವುದಾಗಿ ನಂಬಿಸಿ, ವಿಶ್ವನಾಥ್‌ನನ್ನು ಊರಿಗೆ ಬರುವಂತೆ ಹೇಳಿದ್ದಾರೆ. ನರಗುಂದ ಬಳಿ ಇದ್ದ ವಿಶ್ವನಾಥನನ್ನು ನಂಬಿಸಿ ರಾಜೇಶ್ವರಿ, ನಿನ್ನನ್ನು ಒಂದು ಮಾಡೋದಾಗಿ ಬೇವಿನಮಟ್ಟಿ ಗ್ರಾಮದಿಂದ ಕರೆದೊಯ್ದಿದ್ದರಂತೆ. ಇತ್ತ ಬಾಲಕಿಯನ್ನು ಕರೆತಂದಿದ್ದ ಆರೋಪಿಗಳು ರಾಜೇಶ್ವರಿ ಕತ್ತನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದರಂತೆ. ಇತ್ತ ವಿಶ್ವನಾಥನ ಮರ್ಮಾಂಗ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರಂತೆ.

ಅಲ್ಲಿಂದ ಇಬ್ಬರ ಮೃತ ದೇಹಗಳನ್ನು ಕ್ರೂಸರ್ ವಾಹನದಲ್ಲಿ ಕೊಂಡೊಯ್ದಿದ್ದಾರೆ. ಶವಗಳನ್ನು ಹುನಗುಂದ ಎನ್‌ಹೆಚ್ 50ಯ ಕೃಷ್ಣಾ ನದಿ ಬ್ರಿಡ್ಜ್ ಮೇಲೆ ಕೊಂಡೊಯ್ದು, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವಗಳ ಮೇಲಿನ ಬಟ್ಟೆ ಬಿಚ್ಚಿ, ಹರಿಯುತ್ತಿದ್ದ ಕೃಷ್ಣಾ ನದಿಗೆ ಎಸೆದಿದ್ದಾರೆ. ನಂತರ ಅವರಿಬ್ಬರ ಬಟ್ಟೆಗಳನ್ನು ಸಂಗಮ ಕ್ರಾಸ್ ಬಳಿ ತಂದು ಸುಟ್ಟು ಹಾಕಿದ್ದಾರೆ.

ವಿಚಾರಣೆಗೆ ಸಂದರ್ಭದಲ್ಲಿ ಅನುಮಾನಗೊಂಡ ಪೊಲೀಸರು, ಶಂಕೆಯ ಮೇರೆಗೆ ಅಕ್ಟೋಬರ್ 15 ರಂದು ಯುವತಿಯ ಸಹೋದರ ರವಿ ಹುಲ್ಲಣ್ಣವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಯುವತಿ ತಂದೆ ಪರಸಪ್ಪ ಕರಡಿ ಕುಮ್ಮಕ್ಕಿನಿಂದಲೇ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಪ್ರಕರಣದ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು, ರಾಜೇಶ್ವರಿ ಕರಡಿ (17) ವಿಶ್ವನಾಥ ನೆಲಗಿ (22) ಕೊಲೆಯಾದ ಪ್ರೇಮಿಗಳು. ಪ್ರಕರಣದಲ್ಲಿ ರಾಜೇಶ್ವರಿ ಅಣ್ಣ ರವಿ ಹುಲ್ಲಣ್ಣವರ (19), ಮಾವಂದಿರರಾದ ಹನುಮಂತ ಮಲ್ನಾಡದ (22), ಬೀರಪ್ಪ ದಳವಾಯಿ (18) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

RELATED TOPICS:
English summary :Honor killing: Killing of lovers by calling them

ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ
ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ
ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ
ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ
ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ
ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ
ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ
ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ
ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ
ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು
ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು
ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ  ರಿಜಿಜು ಮನವಿ
ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ ರಿಜಿಜು ಮನವಿ
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ
ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್
ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್
ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ
ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ

ನ್ಯೂಸ್ MORE NEWS...