Sun,Jul26,2026
ಕನ್ನಡ / English

ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಎಲ್ಲವೂ ಗೊತ್ತಿದೆ: ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ | JANATA NEWS

29 Oct 2022

ಗದಗ : ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಎಲ್ಲವೂ ಗೊತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ..

ಗದಗದಲ್ಲಿ ಮಾತಾಡಿದ ಸಚಿವ ಶ್ರೀರಾಮುಲು ಅವರು ಸಿಎಂ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಅಂತಾ ಇದೆ. ಇದನ್ನು ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಇವತ್ತು ಎಸ್​​ಸಿ, ಎಸ್​ಟಿಗೆ ಬಿಜೆಪಿ ಸರ್ಕಾರ ಮೀಸಲಾತಿ ಕೊಟ್ಟಿದೆ. ನಮ್ಮ ಸರ್ಕಾರ ಕೊಟ್ಟ ಬಳಿಕ ಏನೇನೋ ಹೇಳ್ತಾ ಇದ್ದೀರಲ್ಲಾ, ಈಗ ನಿಮ್ಮ ಮಾತುಗಳನ್ನು ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಜೇನುಗೂಡಿಗೆ ಕಲ್ಲು ಹಾಕುದು ಬೇಡ ಅಂತ ಮೀಸಲಾತಿ ನೀಡಿರಲಿಲ್ಲ. ಜಸ್ಟಿಸ್ ನಾಗಮೋಹನ ದಾಸ್ ಅವರ ವರದಿಯನ್ನೂ ಜಾರಿ ಮಾಡ್ಲಿಲ್ಲ. ಮಂಡಲ್ ಕಮೀಷನ್ ಆಗುವಾಗ ಸಿದ್ದರಾಮಯ್ಯ ಎಲ್ಲಿದ್ದರು?ಇವತ್ತು ಮಂಡಲ್ ಕಮೀಷನ್, ನಾಗಮೋಹನದಾಸ್ ವರದಿ ಜಾರಿ ಬಗ್ಗೆ ಕೇಳಿತ್ತೀಯಾ? ನೀನೇನು ಮಾಡಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏಕ ವಚನದಲ್ಲೇ ರಾಮುಲು ಪ್ರಶ್ನೆ ಮಾಡಿದ್ದಾರೆ.

ಬಾಬಾ ಸಾಹೇಬರ ಆಶಯದಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ. ಮೀಸಲಾತಿ ಕೊಟ್ಟ ನಂತರ ನಿನ್ನ ಕಥೆ ಕೇಳುವವರು ಇಲ್ಲಿ ಯಾರೂ ಇಲ್ಲ. ನಿನ್ನ ಅಹಂಕಾರ ಜಾಸ್ತಿಯಾಗಿದೆ. ಚುನಾವಣೆಯಲ್ಲಿ ಜನರು ಅಹಂಕಾರ ಇಳಿಸಲಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.

ರಾಮುಲು ಎಲ್ಲಿದ್ರು ಅಂತಾ ಗೋತ್ತಿಲ್ಲಾ, ನೀನು ಅಧಿಕಾರದಲ್ಲಿದ್ದಾಗ ಏನು? ಮಾಡಿದ್ದೀಯಾ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಟ್ಟಿಯಾ..? ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಹೇಳಿದ್ದಾರೆ. ಜನರು ನಿನ್ನನ್ನೂ ತಿರಸ್ಕಾರ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಿನ್ನ ಅಹಂಕಾರ ಜಾಸ್ತಿಯಾದ್ರೆ ಖಂಡಿತ ನೀನು ಮನೆಗೆ ಹೋಗುತ್ತೀಯಾ ನಿನ್ನ ಅಹಂಕಾರವನ್ನು ಚುನಾವಣೆಯಲ್ಲಿ ಜನರು ಇಳಿಸುವ ಕೆಲಸ ಮಾಡುತ್ತಾರೆ ಎಂದು ರಾಮುಲು ಗುಡುಗಿದ್ದಾರೆ.

RELATED TOPICS:
English summary :Everyone knows what you did when you were in power: Ramulu monologue against Siddaramaiah

ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ
ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ
ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ
ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ
ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ
ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ
ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ
ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ
ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ
ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು
ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು
ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ  ರಿಜಿಜು ಮನವಿ
ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ ರಿಜಿಜು ಮನವಿ
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ
ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್
ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್
ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ
ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ

ನ್ಯೂಸ್ MORE NEWS...