Sun,Jul26,2026
ಕನ್ನಡ / English

ಮತ್ತೆ ಹೆಣ್ಣು ಮಗು ಹುಟ್ಟಿತೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ | JANATA NEWS

06 Nov 2022

ಕೋಲಾರ : ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶೆಟ್ಟಿಹಳ್ಳಿ ಗ್ರಾಮದಲ್ಲಿ ಡ್ರೈವರ್​ ಕೆಲಸ ಮಾಡಿಕೊಂಡಿದ್ದ ಲೋಕೇಶ್​ಗೆ ಕಳೆದ ಎಂಟು ವರ್ಷಗಳ ಹಿಂದೆ ಆಂಧ್ರ ಪ್ರದೇಶ ಪುಂಗನೂರಿನ ಸಿರಿಶ ಎನ್ನುವವರೊಂದಿಗೆ ಮದುವೆ ಮಾಡಲಾಗಿತ್ತು. ಇದಾದ ನಂತರ ಲೋಕೇಶ್​ಗೆ ಎರಡು ವರ್ಷಗಳ ಅಂತರದಲ್ಲಿ ಮೂರು ಜನ ಹಣ್ಣುಮಕ್ಕಳಾಗಿವೆ.

ಲೋಕೇಶ್​​ ನಾಲ್ಕನೇ ಬಾರಿ ಆದ್ರು ಗಂಡು ಮಗು ಜನಿಸುತ್ತದೆ ಎಂದು ಆಸೆ ಹೊಂದಿದ್ದರಂತೆ. ಆದರೆ ನಾಲ್ಕನೇ ಮಗುವೂ ಹೆಣ್ಣಾಗಿದ್ದಕ್ಕೆ ಲೋಕೇಶ್​ ಮನನೊಂದಿದ್ದರು ಎನ್ನಲಾಗಿದೆ.

ಕೆಲವರು ಅದೇ ವಿಚಾರವಾಗಿ ಲೋಕೇಶ್​ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದರಂತೆ ಎನ್ನಲಾಗಿದೆ. ಇದರಿಂದ ಲೋಕೇಶ್ ತಮ್ಮ ಪತ್ನಿಗೆ ನಾಟಿ ಔಷದವನ್ನೂ ಸಹ ಕೊಡಿಸಿದ್ದರಂತೆ.

ಹೀಗಿರುವಾಗಲೇ ನವೆಂಬರ್​ 4 ರಂದು ಲೋಕೇಶ್ ಪತ್ನಿಗೆ ಸಿರಿಶಗೆ ನಾಲ್ಕನೇ ಮಗುವಾಗಿದ್ದು, ಅದೂ ಕೂಡಾ ಹೆಣ್ಣುಮಗುವಾಗಿದೆ. ವಿಷಯ ತಿಳಿದು ಕಣ್ಣೀರು ಹಾಕಿ ತೀವ್ರವಾಗಿ ನೊಂದಿದ್ದ ಲೋಕೇಶ್ ನಿನ್ನೆ ರಾತ್ರಿ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾನೆ.

ರಾತ್ರಿ ತಮ್ಮ ಮನೆಯಲ್ಲಿ‌ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಂದಿನಂತೆ ಲೋಕೇಶ್​ ತಾಯಿ ಮನೆಗೆ ಬಂದು ನೋಡಿದ್ದು, ಲೋಕೇಶ್​ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಪತ್ನಿ ಹಾಗೂ ಮಕ್ಕಳ ರೋಧನೆ ಮುಗಿಲು ಮುಟ್ಟಿದೆ.

ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED TOPICS:
English summary :A father who surrendered to suicide because of the fact that a girl child was born again

ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ

ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ

ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ

ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ

ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ

ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು

ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ  ರಿಜಿಜು ಮನವಿ

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ

ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್

ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ

ನ್ಯೂಸ್ MORE NEWS...