Sat,May30,2026
ಕನ್ನಡ / English

ಅಪ್ಪನ ಹತ್ಯೆಗೈದು 30 ತುಂಡು ತುಂಡಾಗಿ ಕತ್ತರಿಸಿ ಕೊಳವೆಬಾವಿಗೆ ತುರುಕಿದ ಮಗ! | JANATA NEWS

13 Dec 2022

ಬಾಗಲಕೋಟೆ : ಮಗನೊಬ್ಬ ತಂದೆಯನ್ನ ಹತ್ಯೆ ಮಾಡಿ 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಕೊಳವೆ ಬಾವಿಗೆ ಬಿಸಾಕಿರುವ ಭಯಾನಕ ಘಟನೆ ಮುಧೋಳ ನಗರದಲ್ಲಿ ನಡೆದಿದೆ.

ಪರಶುರಾಮ ಕುಳಲಿ(54) ಹತ್ಯೆಯಾಗಿರುವ ವ್ಯಕ್ತಿ. ಆತನ ಪುತ್ರ ವಿಠಲ ಕುಳಲಿ(20) ರಾಡ್‍ನಿಂದ ಹೊಡೆದು ತಂದೆಯನ್ನು ಕೊಲೆ ಮಾಡಿರುವ ಆರೋಪಿ. ತಂದೆಯ ದೇಹವನ್ನು 30ಕ್ಕೂ ಹೆಚ್ಚ ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾನೆ.

ನನ್ನ ಗಂಡ ಒಂದು ವಾರದಿಂದ ಕಾಣಿಸ್ತಿಲ್ಲ. ನನಗೆ ನನ್ನ ಮಗನ ಮೇಲೆ ಅನುಮಾನ ಇದೆ. ದಯವಿಟ್ಟು ತನಿಖೆ ಮಾಡಿ ಹುಡುಕಿಕೊಡಿ ಸರ್​… ಎಂದು ಮಹಿಳೆಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

ಕುಡಿದ ಮತ್ತಲ್ಲಿ ತಂದೆ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಡಿಸೆಂಬರ್​ 6 ರಂದು ಮದ್ಯಪಾನ ಮಾಡಿದ್ದ ಮಗನಿಗೆ ಪರಶುರಾಮ ಬೈದು, ಎರಡೇಟು ಹೊಡೆದು ಬುದ್ಧಿವಾದ ಹೇಳಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ವಿಠಲ ತಂದೆಗೆ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಬಳಿಕ ತಂದೆ ಶವವನ್ನು ಎಸೆಯಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿಯಿರುವ ತಮ್ಮ ಹೊಲಕ್ಕೆ ಹೋಗಿದ್ದಾನೆ. ಹೊಲದಲ್ಲಿನ ಬೋರ್​ವೆಲ್​ನಲ್ಲಿ ತಂದೆ ಶವ ಹಾಕಲು ಪ್ರಯತ್ನಿಸಿದ್ದಾನೆ. ಆದ್ರೆ ಅದು ಒಳಕ್ಕೆ ಹೋಗಿಲ್ಲ. ಹೀಗಾಗಿ ಕೊಡಲಿ ತೆಗೆದುಕೊಂಡು ಶವವನ್ನು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ ನಂತರ ಕೊಳವೆ ಬಾವಿಯೊಳಕ್ಕೆ ಹಾಕಿದ್ದಾನೆ.

ಬಳಿಕ ಒಂದು ವಾರ ಏನೂ ಅರಿಯದಂತೆ ಊರಲ್ಲಿ ಓಡಾಡಿಕೊಂಡಿದ್ದ. ಅನುಮಾನಗೊಂಡ ತಾಯಿ, ಮುಧೋಳ ಠಾಣೆಯಲ್ಲಿ ಮಿಸ್ಸಿಂಗ್​ ಕೇಸ್​ ದಾಖಲಿಸಿದ್ದರು.

ಆರೋಪಿ ವಿಠಲನನ್ನು ಬಂಧಿಸಿರುವ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

RELATED TOPICS:
English summary :The son who killed his father and cut him into 30 pieces and pushed them into the borehole!

ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದ ಕಾರಣ ಗದ್ದಲ
ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದ ಕಾರಣ ಗದ್ದಲ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿ, ಮಂತ್ರಿಮಂಡಲ ವಜಾ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿ, ಮಂತ್ರಿಮಂಡಲ ವಜಾ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಅರ್ಮೇನಿಯಾ ಮಿಲಿಟರಿ ಮೆರವಣಿಗೆಯಲ್ಲಿ ಭಾರತೀಯ ಮೂಲದ ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಪ್ರದರ್ಶನ
ಅರ್ಮೇನಿಯಾ ಮಿಲಿಟರಿ ಮೆರವಣಿಗೆಯಲ್ಲಿ ಭಾರತೀಯ ಮೂಲದ ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಪ್ರದರ್ಶನ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆಯನ್ನು ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆಯನ್ನು ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
3 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಹೊಸ ಸಿಎಂ
3 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಹೊಸ ಸಿಎಂ
ಅಂತಾರಾಷ್ಟ್ರೀಯ ಗಡಿಗಳ ಬಳಿಯ ಅಕ್ರಮ ರಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಮಿತ್ ಶಾ ಆದೇಶ
ಅಂತಾರಾಷ್ಟ್ರೀಯ ಗಡಿಗಳ ಬಳಿಯ ಅಕ್ರಮ ರಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಮಿತ್ ಶಾ ಆದೇಶ
ಅಸ್ಸಾಂ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆ, 2026 ಅನ್ನು ಅಂಗೀಕರಿಸಿದೆ
ಅಸ್ಸಾಂ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆ, 2026 ಅನ್ನು ಅಂಗೀಕರಿಸಿದೆ
ಕರ್ನಾಟಕದಲ್ಲಿ ಶೀಘ್ರದಲ್ಲೇ ಹೊಸ ಸಿಎಂ ಮತ್ತು ನಾಲ್ವರು ಡಿಸಿಎಂಗಳ ನೇಮಕ ಸಾಧ್ಯತೆ?
ಕರ್ನಾಟಕದಲ್ಲಿ ಶೀಘ್ರದಲ್ಲೇ ಹೊಸ ಸಿಎಂ ಮತ್ತು ನಾಲ್ವರು ಡಿಸಿಎಂಗಳ ನೇಮಕ ಸಾಧ್ಯತೆ?
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ರಣವೀರ್ ಸಿಂಗ್ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ರಣವೀರ್ ಸಿಂಗ್ ಪ್ರಾರ್ಥನೆ ಸಲ್ಲಿಸಿದರು.
ಪೋರ್ಟಲ್‌ನಲ್ಲಿ ವಕ್ಫ್ ಮಂಡಳಿ ಅಕ್ರಮವಾಗಿ ಅಪ್‌ಲೋಡ್ ಮಾಡಲಾದ ಆಸ್ತಿಗಳನ್ನು ತೆಗೆದುಹಾಕಲು ಕೇಂದ್ರಕ್ಕೆ ರಾಜೀವ್ ಚಂದ್ರಶೇಖರ್ ಮನವಿ
ಪೋರ್ಟಲ್‌ನಲ್ಲಿ ವಕ್ಫ್ ಮಂಡಳಿ ಅಕ್ರಮವಾಗಿ ಅಪ್‌ಲೋಡ್ ಮಾಡಲಾದ ಆಸ್ತಿಗಳನ್ನು ತೆಗೆದುಹಾಕಲು ಕೇಂದ್ರಕ್ಕೆ ರಾಜೀವ್ ಚಂದ್ರಶೇಖರ್ ಮನವಿ
ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ: 3ನೇ ಸ್ಥಾನದಲ್ಲಿ ಆಸೀನರಾಗಿದ್ದ ಎಚ್‌ಡಿ ಕುಮಾರಸ್ವಾಮಿ
ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ: 3ನೇ ಸ್ಥಾನದಲ್ಲಿ ಆಸೀನರಾಗಿದ್ದ ಎಚ್‌ಡಿ ಕುಮಾರಸ್ವಾಮಿ
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್

ನ್ಯೂಸ್ MORE NEWS...