Sat,Oct18,2025
ಕನ್ನಡ / English

ಇಶಾ ಫೌಂಡೇಶನ್ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ! | JANATA NEWS

13 Jan 2023

ಚಿಕ್ಕಬಳ್ಳಾಪುರ : ಇಶಾ ಫೌಂಡೇಷನ್‌ ಸ್ಥಾಪಿಸಿರುವ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.

ಜನವರಿ 15 ಭಾನುವಾರದಂದು ಇಶಾ ಫೌಂಡೇಶನ್ ವತಿಯಿಂದ ನಡೆಯಲಿರುವ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಆದ್ರೆ, ಉಳಿದಂತೆ ಕಾಮಗಾರಿ ನಡೆಸದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದೆ.

ಜ.15 ಸಂಕ್ರಾಂತಿಯಂದು ನಿಗದಿಯಾದ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ, ಸಿಎಂ ಆಗಮಿಸುತ್ತಿದ್ದಾರೆ. ಪಿಐಎಲ್ ದಾಖಲಿಸುವ ಮುನ್ನವೇ ಈ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಬೇಕು ಎಂದು ಇಶಾ ಫೌಂಡೇಶನ್‌ ಮನವಿ ಮಾಡಿತ್ತು.

ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ಮರಗಳನ್ನು ಕಡಿಯಬಾರದು, ತೀರಾ ಅಗತ್ಯವಾಗಿರುವ ವ್ಯವಸ್ಥೆ ಮಾತ್ರ ಮಾಡಬೇಕು. ಉಳಿದಂತೆ ಯಥಾಸ್ಥಿತಿ ಮುಂದುವರಿಯಬೇಕು ಎಂದು ಷರತ್ತು ವಿಧಿಸಿ ಒಂದು ದಿನ ಮಟ್ಟಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ.

ಯಾವುದೇ ಕಾಮಗಾರಿ ನಡೆಸದಂತೆ ಈ ಹಿಂದೆ ನೀಡಿದ್ದ ಯತಾಸ್ಥಿತಿ ಮುಂದುವರೆಯಲಿದೆ ಎಂದು ತಿಳಿಸಿದೆ. ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್ ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಶನ್​ ವತಿಯಿಂದ ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ, ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಸರ್ಕಾರ ಮತ್ತು ಇಶಾ ಯೋಗ ಕೇಂದ್ರ ಸೇರಿ 16 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಆದಿಯೋಗಿ ಪ್ರತಿಮೆ ಸ್ಥಾಪನೆ ಸ್ಥಳವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ಕೋರ್ಟ್​​ ಮೊರೆಹೋಗಿದ್ದರು.

ಆದಿಯೋಗಿ ಪ್ರತಿಮೆ ಸ್ಥಾಪನೆಗಾಗಿ ಸರ್ಕಾರ ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಿದೆ. ನಂದಿ ಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ವಾದ ಮಂಡಿಸಲಾಗಿದೆ. ಪರಿಸರದ ಮೇಲೆ ಪರಿಣಾಮ ಬೀರಬಹುದೆಂಬುದನ್ನು ಒಪ್ಪಬಹುದು ಎಂದು ಸರ್ಕಾರದ‌ ಅಧಿಸೂಚನೆಯನ್ನು ಪ್ರಶ್ನಿಸಲು ಅವಕಾಶ ನೀಡಿದ ಹೈಕೋರ್ಟ್, ಯಥಾಸ್ಥಿತಿಗೆ ಆದೇಶಿಸಿತ್ತು.

RELATED TOPICS:
English summary :High Court permission for Isha Foundation Adiyogi statue unveiling program!

ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ
ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ
ಸರ್ಕಾರಿ ಸ್ಥಳಗಳಲ್ಲಿ ನಮಾಜ್  ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ
ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ
33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ
33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ
ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ
ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ
ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ
ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ
ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ
ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ
ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ
ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ
ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ

ನ್ಯೂಸ್ MORE NEWS...