ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಗೆಳೆಯರಿಂದಲೇ ನವವಿವಾಹಿತ ಹತ್ಯೆ | JANATA NEWS
ಹಾಸನ : ನಾಲ್ಕು ದಿನಗಳ ಹಿಂದೆ ನಾಪತ್ತೆ ಆಗಿದ್ದ ಯುವಕನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಹಾಸನದ ಹೊಯ್ಸಳನಗರ ಬಡಾವಣೆಯ ಲಿಖಿತ್ ಗೌಡ (26) ಸಂಜೆ ಮನೆಯಿಂದ ಹೋದವರು ರಾತ್ರಿಯಾದರೂ ಬಂದಿಲ್ಲ. ಫೋನ್ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಯಿಂದ ಹೋಗುವಾಗ ಸ್ನೇಹಿತ ಸಾಗರ್ ಜೊತೆಗೆ ಹೋಗುವದಾಗಿ ಹೇಳಿದ್ದರಿಂದ ಅವನಿಗೆ ಫೋನ್ ಮಾಡಿದ್ರೆ ಅವನ ಮೊಬೈಲ್ ಕೂಡ ಆಫ್ ಆಗಿತ್ತು. ಭಯಗೊಂಡ ಮನೆಯವರು ಬಡಾವಣೆ ಠಾಣೆಗೆ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ ನೀಡಿದ್ದರು.
ಲಿಖಿತ್ ಗೌಡ ಕಳೆದ ಎಂಟು ತಿಂಗಳ ಹಿಂದೆ ಮದುವೆ ಆಗಿದ್ದರು. ಬಿಎಂ ರಸ್ತೆಯಲ್ಲಿ ಕಾರ್ ಸರ್ವೀಸ್ ಸ್ಟೇಷನ್ ಮಾಡಿದ್ದ. ಬಂದ ಹಣವನ್ನ ಬೇರೆ ವ್ಯವಹಾರಕ್ಕೆ ತೊಡಗಿಸಲು ಯೋಚನೆ ಮಾಡಿದ್ದ.
ಆಗ ತನ್ನದೇ ಸ್ನೇಹಿತ ನವೀನ್ ಮೂಲಕ ಒಂದು ಟ್ಯಾಂಕರ್ ಖರೀದಿ ಮಾಡೋಕೆ ಯೋಚಿಸಿ ಟ್ಯಾಂಕರ್ ನೋಡಿದ್ದ. 12 ಲಕ್ಷ ರೂಪಾಯಿಗೆ ವ್ಯವಹಾರದ ಮಾತನಾಡಿ ಎರಡೂವರೆ ಲಕ್ಷ ಅಡ್ವಾನ್ಸ್ ಕೂಡ ಕೊಟ್ಟಿದ್ದ. ವಾಹನ ಇಷ್ಟ ಆಗದ ಕಾರಣ ವ್ಯವಹಾರ ಕ್ಯಾನ್ಸಲ್ ಮಾಡಿದ್ದ. ಪಡೆದಿದ್ದ ಎರಡೂವರೆ ಲಕ್ಷ ಅಡ್ವಾನ್ಸ್ ಹಣ ವಾಪಸ್ ಕೊಡಲು ಹೇಳಿದ್ದ, ಆದ್ರೆ ಒಂದೂವರೆ ವರ್ಷದಿಂದ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದ.
ಹಣ ವಾಪಸ್ ನೀಡದ ಹಿನ್ನೆಲೆಯಲ್ಲಿ ಲಿಖಿತ್‌ಗೌಡ ಹಾಗೂ ನವೀನ್ ಮಧ್ಯೆ ಮನಸ್ಥಾಪ ಉಂಟಾಗಿತ್ತು. ಇದರಿಂದ ಕೋಪಗೊಂಡ ಲಿಖಿತ್‌ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ಆಯಕ್ವಿವ್ ಹೊಂಡಾ ಆಯಕ್ಟೀವಾ ಬೈಕ್ ಸೀಜ್ ಮಾಡಿಕೊಂಡು ಬಂದಿದ್ದ.
ಫೆಬ್ರವರಿ 5 ರಂದು ಸಂಜೆ ಹಣ ಕೊಡೋದಾಗಿ ನವೀನ್ ಹಾಗೂ ಸಾಗರ್ ಎಂಬುವವರು ಲಿಖಿತ್ನನ್ನು ಕರೆದುಕೊಂಡು ಹೋಗಿದ್ದರಂತೆ. ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು.
ತೀವ್ರ ಹುಡುಕಾಟ ನಡೆಸಿದ ಬಳಿಕ ಲಿಖಿತ್ ನನ್ನು ಕರೆದೊಯ್ದಿದ್ದ ಸಾಗರ್ ಗ್ರಾಮದ ಪಕ್ಕದ ಯೋಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಲಿಖಿತ್ ಗೌಡ ಮೃತದೇಹ ಪತ್ತೆಯಾಗಿದೆ. ಲಿಖಿತ್ ನನ್ನು ಇರಿದು ಸಾಯಿಸಿರೋ ಹಂತಕರು ಮೃತದೇಹವನ್ನು ಕಾಡಿನಲ್ಲಿ ಬಿಸಾಡಿ ಎಸ್ಕೇಪ್ ಆಗಿದ್ದಾರೆ.