Wed,Apr15,2026
ಕನ್ನಡ / English

ಅವನಿಗೆ ಮಾನಸಿಕ ಖಾಯಿಲೆ ಇರಬೇಕು. ಅವನು ಅಶ್ವಥ್ ನಾರಾಯಣ ಅಲ್ಲ, ಅಸ್ವಸ್ಥ ನಾರಾಯಣ ಇರಬೇಕು | JANATA NEWS

18 Feb 2023

ಕೊಪ್ಪಳ : ಅವನಿಗೆ ಮಾನಸಿಕ ಖಾಯಿಲೆ ಇರಬೇಕು. ಅವನು ಅಶ್ವಥ್ ನಾರಾಯಣ ಅಲ್ಲ, ಅಸ್ವಸ್ಥ ನಾರಾಯಣ ಇರಬೇಕು. ಅವನು ನನ್ನ ಬಗ್ಗೆ ಹೇಳುತ್ತಾನೆ, ಅವನಿಗೆ ತಲೆ ಸರಿಯಲ್ಲ. ಇವರೆಲ್ಲಾ ನಾಲಾಯಕ್ ರಾಜಕಾರಣಿಗಳು. ಇಂಥವರು ಅಧಿಕಾರದಲ್ಲಿ ಇರಬೇಕಾ ಎಂದರು.

ಈ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಅವರು, ಸಚಿವ ಅಶ್ವಥ್ ನಾರಾಯಣ ಎನ್ನುವಾತ ಟಿಪ್ಪುವನ್ನು ಹೊಡೆದು ಹಾಕಿದಂತೆ ನನ್ನನ್ನು ಹೊಡೆದಾಕಬೇಕು ಎಂದು ಹೇಳಿದ್ದಾನೆ. ಅವನು ಅಶ್ವಥ್ ನಾರಾಯಣ ಅಲ್ಲ, ಅವನೊಬ್ಬ ಅಸ್ವಸ್ಥ ನಾರಾಯಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ರಸ್ತೆ, ನೀರು ರೈತರ ಬಗ್ಗೆ ಮಾತನಾಡುತ್ತಿಲ್ಲ. ಲವ್ ಜಿಹಾದ್ ಬಗ್ಗೆ ಮಾತನಾಡು ಎಂದು ಕಟೀಲ್ ಹೇಳ್ತಾನೆ. ಅಮಿತಾ ಶಾ ಅಂತಾ ರಾಜ್ಯಕ್ಕೆ ಬಂದು ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ಕ ಅಂತ ಹೇಳುತ್ತಾನೆ.

ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ. ಜನರು ಬಡೆದಾಡುಕೊಂಡು ಇರಬೇಕು. ಒಡೆದಾಳುವ ನೀತಿ ಇರುವುದು ಬಿಜೆಪಿಯಲ್ಲಿದೆ. ಬಿಜೆಪಿಯವರು ಸಮಾಜ ಸೇವೆ ಮರೆತಿದ್ದಾರೆ. ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ ಎಂದರು.

ರಾಜ್ಯವನ್ನು ಹಾದಿ ತಪ್ಪಿ ಸುತ್ತಿರುವ ಕೋಮುವಾದಿ ಬಿಜೆಪಿ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿ, ಜೆಡಿಎಸ್ ನ ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಬಗ್ಗೆ ಜನತೆಗೆ ಭ್ರಮ ನಿರಸನವಾಗಿದೆ. ಕೋಮುವಾದಿ ಬಿಜೆಪಿ ದೂರವಿಡಲು ಕಳೆದ ಬಾರಿ ನಾವು 80 ಸ್ಥಾನ ಪಡೆದಿದ್ದರೂ 37 ಸ್ಥಾನ ಪಡೆದಿದ್ದ ಜೆಡಿಎಸ್ ಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದೇವು. ಆದರೆ, ಜೆಡಿಎಸ್ ಕೂಡ ಹೇಳಿ ಕೊಳ್ಳುವಂತ ಕೆಲಸ ಮಾಡಲಿಲ್ಲ. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ದ್ವೇಷದ ರಾಜಕಾರಣ, ಸಾಮರಸ್ಯವನ್ನು ಹಾಳು ಮಾಡುತ್ತಿದೆ ಎಂದು ಕಿಡಿಕಾರಿದರು.

ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಬರುತ್ತದೆ. ಜನರು ಈ ಬಾರಿ ಸಾಕಷ್ಟು ಪ್ರೀತಿ ಕಾಂಗ್ರೆಸ್ ನ ಮೇಲೆ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪರವಾದ ಅಲೆಯಿದೆ. ಈ ಬಾರಿ ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

RELATED TOPICS:
English summary :He must have mental illness. He is not Aswath Narayana, he should be Asvastha Narayana

ಪ್ರಧಾನಿ ಮೋದಿ ಗೆ ದೂರವಾಣಿ ಕರೆ ಮಾಡಿ 40 ನಿಮಿಷ ಮಾತನಾಡಿದ ಅಧ್ಯಕ್ಷ ಟ್ರಂಪ್
ಪ್ರಧಾನಿ ಮೋದಿ ಗೆ ದೂರವಾಣಿ ಕರೆ ಮಾಡಿ 40 ನಿಮಿಷ ಮಾತನಾಡಿದ ಅಧ್ಯಕ್ಷ ಟ್ರಂಪ್
ಹೆಬ್ಬಾಳದಲ್ಲಿ 55 ಎಕರೆ ಭೂಮಿ ಖಾಸಗಿ ಸಂಸ್ಥೆಗೆ ವರ್ಗಾವಣೆ ರದ್ದುಗೊಳಿಸಿದ ಹೈಕೋರ್ಟ್ : ಸಿಬಿಐ ತನಿಖೆಗೆ ಆದೇಶ
ಹೆಬ್ಬಾಳದಲ್ಲಿ 55 ಎಕರೆ ಭೂಮಿ ಖಾಸಗಿ ಸಂಸ್ಥೆಗೆ ವರ್ಗಾವಣೆ ರದ್ದುಗೊಳಿಸಿದ ಹೈಕೋರ್ಟ್ : ಸಿಬಿಐ ತನಿಖೆಗೆ ಆದೇಶ
ಟಿಸಿಎಸ್ ನಲ್ಲಿ ಪಿಓಎಸ್ಎಚ್(ಪೊಶ್) ಆಡಿಟ್ ಕೋರಿದ ಎನ್ಐಟಿಇಎಸ್ : ಐಟಿ ವಲಯದಾದ್ಯಂತ ವ್ಯಾಪಕ ತನಿಖೆಗೆ ಒತ್ತಾಯ
ಟಿಸಿಎಸ್ ನಲ್ಲಿ ಪಿಓಎಸ್ಎಚ್(ಪೊಶ್) ಆಡಿಟ್ ಕೋರಿದ ಎನ್ಐಟಿಇಎಸ್ : ಐಟಿ ವಲಯದಾದ್ಯಂತ ವ್ಯಾಪಕ ತನಿಖೆಗೆ ಒತ್ತಾಯ
 ಟಿಸಿಎಸ್ ನಾಸಿಕ್ ಪ್ರಕರಣ: ಕಾರ್ಯಾಚರಣೆ ಮುಖ್ಯಸ್ಥ ಕಸ್ಟಡಿಗೆ ; ಟಾಟಾ ಇಂದ ಆಂತರಿಕ ತನಿಖೆ ವಿಸ್ತರಣೆ
ಟಿಸಿಎಸ್ ನಾಸಿಕ್ ಪ್ರಕರಣ: ಕಾರ್ಯಾಚರಣೆ ಮುಖ್ಯಸ್ಥ ಕಸ್ಟಡಿಗೆ ; ಟಾಟಾ ಇಂದ ಆಂತರಿಕ ತನಿಖೆ ವಿಸ್ತರಣೆ
ಜನರ ಹೆಸರುಗಳನ್ನು ಅಂತಿಮ ತೀರ್ಪಿನ ನಂತರ ಸೇರಿಸಿದರೆ... ಮತ ಚಲಾಯಿಸಲು ಅವಕಾಶ - ಸುಪ್ರೀಂ
ಜನರ ಹೆಸರುಗಳನ್ನು ಅಂತಿಮ ತೀರ್ಪಿನ ನಂತರ ಸೇರಿಸಿದರೆ... ಮತ ಚಲಾಯಿಸಲು ಅವಕಾಶ - ಸುಪ್ರೀಂ
ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
 ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ

ನ್ಯೂಸ್ MORE NEWS...