ಮೇಕಪ್ನಿಂದಾಗಿ ವಧುವಿನ ಮುಖ ವಿರೂಪ, ಮದುವೆಯೇ ಬೇಡ ಎಂದ ವರ | JANATA NEWS
ಹಾಸನ : ಮೇಕಪ್ ವಧುವಿನ ಮುಖದ ಬಣ್ಣವನ್ನೇ ಕೆಡಿಸಿದ್ದಷ್ಟೇ ಅಲ್ಲ, ಇದೇ ಕಾರಣಕ್ಕೆ ಮದುವೆ ಕೂಡ ನಿಂತು ಹೋಗಿದೆ. ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯುವತಿಗೆ ಮಾ.2 ಕ್ಕೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಇದಕ್ಕೂ ಮುನ್ನ ಮದುಮಗಳು ಬ್ಯೂಟಿ ಪಾರ್ಲರ್‌ಗೆ ಹೋಗಿ ಮದುವೆ ದಿನದ ಮೇಕಪ್‌ಗೆ ಆರ್ಡರ್ ಮಾಡಿದರು.
10 ದಿನದ ಮೊದಲೇ ಮುಖದ ಕಾಂತಿ ಹೆಚ್ಚಿಸಿಕೊಳ್ಳೋ ಆಸೆಯಿಂದ ಅಲ್ಲೇ ಫೇಷಿಯಲ್ ಸಹ ಮಾಡಿಸಿಕೊಂಡರು. ಫೇಷಿಯಲ್ ಮಾಡಿಸಿಕೊಂಡ ಮರುದಿನವೇ ವಧುವಿನ ಮುಖವನ್ನೇ ವಿಕಾರ ಮಾಡಿಬಿಟ್ಟಿದೆ.
ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದೆ. ಇದರಿಂದ ಆತಂಕಗೊಂಡ ಯುವತಿಯನ್ನು ಕೂಡಲೇ ನಗರದ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮದುಮಗಳ ಮುಖ ಸಂಪೂರ್ಣ ಅಂದಗೆಟ್ಟಿರುವುದರಿಂದ ನಿಶ್ಚಯವಾಗಿದ್ದ ಮದುವೆ ರದ್ದಾಗಿದೆ.
ವಧುವಿನ ಕುಟುಂಬಸ್ಥರು ಬ್ಯೂಟಿಪಾರ್ಲರ್ನ ಗಂಗಾ ಎಂಬಾಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.