H3N2 ವೈರಸ್‌ಗೆ ಕರ್ನಾಟಕದಲ್ಲಿ ಮೊದಲ ಬಲಿ, ಆರೋಗ್ಯ ಇಲಾಖೆಯಿಂದ ದೃಢ! | JANATA NEWS
ಹಾಸನ : ಎಚ್3ಎನ್2 ವೈರಸ್‌ಗೆ 82 ವರ್ಷದ ವ್ಯಕ್ತಿಯೊಬ್ಬರು ಮೊದಲ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಈ ಸೋಂಕಿನಿಂದ ಹಾಸನ ಜಿಲ್ಲೆಯ ಆಲೂರಿನಲ್ಲಿ 78 ವರ್ಷದ ವೃದ್ಧ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಫೆಬ್ರವರಿ 24 ರಂದು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅವರು ಮಾರ್ಚ್ 1 ರಂದು ನಿಧನ ಹೊಂದಿದರು ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಇವರಿಗೆ ಎಚ್3 ಎನ್2 ವೈರಸ್ ದೃಢ ಆಗಿರುವ ಬಗ್ಗೆ ವೈದ್ಯರು ಇಂದು ಮಾಹಿತಿ ನೀಡಿದ್ದಾರೆ.
ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದರಿಂದ ವೃದ್ಧ ಆಸ್ಪತ್ರೆಗೆ ಸೇರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೇ ಈಗಾಗಲೇ ಆಲೂರಿನಲ್ಲಿ ಎಲ್ಲರ ಅರೋಗ್ಯ ತಪಾಸಣೆ ನಡೆಸಿ ಪರೀಕ್ಷೆಗಾಗಿ ಗಂಟಲು ದ್ರವವನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ತಪಾಸಣೆ ನಡೆಸಲು ಮುಂದಾಗಿದೆ.
ಇದು 3-5 ದಿನಗಳವರೆಗೆ ಜ್ವರ ಮತ್ತು ನಿರಂತರ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ವೈದ್ಯಕೀಯ ತಜ್ಞರು H3N2 ನಿಭಾಯಿಸಲು ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಿದ್ದಾರೆ. ಇದರ ಲಕ್ಷಣಗಳು ಜ್ವರ, ನೋಯುತ್ತಿರುವ ಗಂಟಲು, ಕೆಮ್ಮು, ದೇಹದ ನೋವು ಮತ್ತು ಶೀತ.
ಸ್ವಚ್ಛತೆ, ಜನಸಂದಣಿ ತಡೆಗಟ್ಟುವಿಕೆ, ಕೈ ಸ್ವಚ್ಛತೆ ಮುಂತಾದ ಕ್ರಮಗಳ ಮೂಲಕ ಸೋಂಕು ಹರಡುವಿಕೆಯನ್ನು ನಿಭಾಯಿಸಬಹುದು.