Sat,Oct18,2025
ಕನ್ನಡ / English

ಕಾಂಗ್ರೆಸ್ ನವರಿಗೆ ನನ್ನ ಸಮಾಧಿ ಚಿಂತೆ, ನನಗೆ ಅಭಿವೃದ್ಧಿ ಚಿಂತೆ | JANATA NEWS

12 Mar 2023

ಮಂಡ್ಯ : ಇಂದು ಪ್ರಧಾನಿ ಮೋದಿ ಜಿಲ್ಲೆಗೆ ಭೇಟಿ ನೀಡಿದ್ದು, ಬೆಂಗಳೂರು - ಮೈಸೂರು ದಶಪಥ ರಸ್ತೆಯನ್ನು ಉದ್ಘಾಟನೆ ಮಾಡಿದ್ದಾರೆ. ಅದಕ್ಕೂ ಮೊದಲು ಜೆಡಿಎಸ್​ ಭದ್ರಕೋಟೆಯಲ್ಲಿ ನಮೋ ಭರ್ಜರಿ ರೋಡ್​ ಶೋ ನಡೆಸಿದರು. ಈ ವೇಳೆ ಮಂಡ್ಯ ಜನ ಪ್ರಧಾನಿ ಮೇಲೆ ಕೇಸರಿ ಹೂ ಮಳೆಯನ್ನೇ ಸುರಿಸಿದರು.

janata

ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿ ಬಾರಿಯೂ ಕರ್ನಾಟಕಕ್ಕೆ ಬಂದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಸಕ್ಕರೆ ನಗರ ಮಂಡ್ಯ ಜನ ತೋರಿಸಿದ ಪ್ರೀತಿಗೆ ವಂದನೆ. ಸಕ್ಕರೆ ನಗರದ ಪ್ರೀತಿಗೆ ಶಿರಬಾಗಿ ನಮಿಸುತ್ತೇನೆ. ತಾಯಿ ಭುವನೇಶ್ವರಿಗೆ ನನ್ನ ನಮನಗಳು, ಆದಿ ಚುಂಚನಗಿರಿ, ಮೇಲುಕೋಟೆಯ ಗುರುಗಳಿಗೂ ನಮನಗಳು, ಸಕ್ಕರೆ ನಗರ ಮಂಡ್ಯ, ಮಧುರ ಮಂಡ್ಯ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕಳೆದ ಕೆಲವು ದಿನಗಳಿಂದ ಕರ್ನಾಟಕ ಜನತಾ ಜನಾರ್ದನರ ಭೇಟಿಯ ಅವಕಾಶ ಸಿಗುತ್ತಿದೆ. ಇಲ್ಲಿ ನನಗೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ನೀವು ನಮಗೆ ನೀಡಿದ ಪ್ರೀತಿಯನ್ನು ಬಡ್ಡಿ ಸಮೇತ ವಾಪಸ್​ ಮಾಡುತ್ತೇವೆ ಎಂದು ಭರವಸೆ ನೀಡಿದರು.

janata

ಈ ಹೆದ್ದಾರಿ ಉದ್ಘಾಟನೆಯು ಪರಿಶ್ರಮದ ಭಾಗವಾಗಿದೆ. ಮೈಸೂರು-ಬೆಂಗಳೂರು ನಡುವೆ ಅರ್ಧಕ್ಕಿಂತಹ ಪ್ರಯಾಣ ಅವಧಿ ಕಡಿಮೆಯಾಗಿದೆ. ಮೈಸೂರು-ಕುಶಾಲನಗರ ನಡುವೆಯೂ ಹೆದ್ದಾರಿ ಅಭಿವೃದ್ಧಿ ಆಗಲಿದೆ. ಇದರ ಮೂಲಕ ಸಮೃದ್ಧಿಯ ರಸ್ತೆಯು ತೆರೆದುಕೊಳ್ಳಲಿದೆ. ದೇಶದಲ್ಲಿ ಮೂಲಸೌಕರ್ಯ ಬಗ್ಗೆ ಚರ್ಚೆಯಾದಾಗಲೆಲ್ಲ ಸರ್​. ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್​ ಹೆಸರು ಪ್ರಸ್ತುತ. ಅವರ ಮುಂದಾಲೋಚನೆಯ ಫಲ ಈಗ ಇಲ್ಲಿ ಕಾಣುತ್ತಿದೆ ಎಂದರು. 2014ಕ್ಕೂ ಮೊದಲಿದ್ದ ಕಾಂಗ್ರೆಸ್ ಸರ್ಕಾರ ಬಡವರನ್ನು ಲೂಟಿ ಮಾಡಿದೆ. ಕಾಂಗ್ರೆಸ್ ನಾಯಕರು ನರೇಂದ್ರ ಮೋದಿಯವರನ್ನು ಸಮಾಧಿ ಮಾಡುವ ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.

ಬಡವರನ್ನು ಲೂಟಿ ಮಾಡುವ ಸರ್ಕಾರವಿತ್ತು. ಅದನ್ನು ಕಿತ್ತೊಗೆಯಲಾಗಿದೆ. ಅಭಿವೃದ್ಧಿಗಾಗಿ ಮತ್ತೆ ಡಬ್ಬಲ್ ಎಂಜಿನ್ ಸರ್ಕಾರವನ್ನೇ ಗೆಲ್ಲಿಸಿ. ಕಾಂಗ್ರೆಸ್ ನವರು ಸಮಾಧಿ ತೆಗೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ನಾನು ಬೆಂಗಳೂರು - ಮೈಸೂರು ಹೆದ್ದಾರಿಯ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ಕಾಂಗ್ರೆಸ್ ನವರಿಗೆ ನನ್ನ ಸಮಾಧಿ ಚಿಂತೆ, ನನಗೆ ಅಭಿವೃದ್ಧಿ ಚಿಂತೆ ಎಂದಿದ್ದಾರೆ.

ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಈ ರಸ್ತೆಯೂ ಸಾಕ್ಷಿಯಾಗಿದೆ. ನಿಮ್ಮ ಪ್ರೀತಿಯ ಋಣವನ್ನು ಅಭಿವೃದ್ಧಿ ಮೂಲಕ ಬಡ್ಡಿ ಸಮೇತ ತೀರಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಈ ಹೈವೇ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ಹೈವೆ ಬಗ್ಗೆ ಬಹಳ ಮೆಚ್ಚುಗೆ ಬರುತ್ತಿದೆ. ದೇಶದ ಎಲ್ಲಾ ಕಡೆ ಈ ರೀತಿ ಹೈವೆ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ಈ ರಸ್ತೆ ನೋಡಿದ ಯುವಕರ ಮನದಲ್ಲಿ ಹೆಮ್ಮೆ, ಗರ್ವ ಮೂಡಿದೆ ಎಂದು ನುಡಿದರು.

janata

RELATED TOPICS:
English summary :Congress is worried about my grave, I am worried about development

ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ
ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ
ಸರ್ಕಾರಿ ಸ್ಥಳಗಳಲ್ಲಿ ನಮಾಜ್  ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ
ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ
33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ
33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ
ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ
ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ
ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ
ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ
ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ
ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ
ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ
ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ
ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ

ನ್ಯೂಸ್ MORE NEWS...