Sun,Jul26,2026
ಕನ್ನಡ / English

ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ರದ್ದು: ಇದುವರೆಗೆ ಕಾಂಗ್ರೆಸ್​​ ನಾಯಕರು ಯಾಕೆ ಕೋರ್ಟ್ ಮೊರೆ ಹೋಗಿಲ್ಲ? | JANATA NEWS

25 Mar 2023

ದಾವಣಗೆರೆ : ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ರದ್ದುಗೊಳಿಸಿದ ಬಗ್ಗೆ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲರಾಗಿದ್ದು, ರಾಹುಲ್ ಗಾಂಧಿಯವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಕೋರ್ಟ್ ತೀರ್ಪು ಅವರ ಪರ ಬಂದರೆ ನ್ಯಾಯಾಂಗದ ಜಯ ಎನ್ನುತ್ತಾರೆ. ಅದೇ ವಿರುದ್ಧ ಬಂದರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಬೀದಿಯಲ್ಲಿ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ತೀರ್ಪು ಬದಲಾಗುತ್ತಾ? ನಿಮ್ಮಲ್ಲಿ ಘಟಾನುಘಟಿ ವಕೀಲರು ಇದ್ದಾರೆ. ನಿಮಗೆ ತೀರ್ಪು ಸರಿಯಾಗಿಲ್ಲ ಅಂದರೆ ಹೈಯರ್ ಕೋರ್ಟ್ ಇದೆ. ಅಲ್ಲಿಗೆ ಹೋಗಿ ಎಂದು ರಾಹುಲ್ ಗಾಂಧಿ ಪ್ರಕರಣದಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ನಡೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ.

ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಗೆ ಒಳಗಾದರೆ ಸದಸ್ಯತ್ವ ರದ್ದಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಕಾಂಗ್ರೆಸ್​​ ನಾಯಕರು ಯಾಕೆ ಕೋರ್ಟ್ ಮೊರೆ ಹೋಗಿಲ್ಲ ಎಂದು ಪ್ರಶ್ನಿಸಿದರು.

ಅವರಲ್ಲಿ ಸಮರ್ಥ ವಕೀಲರಿದ್ದಾರೆ. ಆದರೆ ಅವರು ಕೋರ್ಟ್​ಗೆ ಹೋಗದೆ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಬೀದಿಯಲ್ಲಿ ನಿಂತು ಡ್ರಾಮಾ ಮಾಡುತ್ತಿದ್ದಾರೆ. ಸದಸ್ಯತ್ವ ಕಳೆದುಕೊಂಡವರಲ್ಲಿ ರಾಹುಲ್ ಗಾಂಧಿ ಮೊದಲಿಗರಲ್ಲ. ಈವರೆಗೆ 10 ಮಂದಿ ಜನಪ್ರತಿನಿಧಿಗಳು ಸ್ಥಾನ ಕಳೆದುಕೊಂಡಿದ್ದಾರೆ. ಅಂದು ರಾಹುಲ್ ಗಾಂಧಿ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

2013ರಲ್ಲಿ ಸುಗ್ರಿವಾಜ್ಞೆ ಪ್ರತಿಯನ್ನು ರಾಹುಲ್ ಗಾಂಧಿ ಸಂಸತ್​ನಲ್ಲಿ ಹರಿದುಹಾಕಿದ್ದರು. ಈ ಮೂಲಕ ಅನರ್ಹತೆಯ ಮಸೂದೆಗೆ ನನ್ನ ವಿರೋಧವಿದೆ ಎಂದು ಹೇಳಿ ಹಿರೋಯಿಸಂ ತೋರಿಸಿದ್ದರು. ಅಂದು ಹಾಗೆ ಮಾಡದಿದ್ದರೆ ಇಂದು ಅವರು ಅನರ್ಹತೆಯಿಂದ ಬಚಾವ್ ಆಗುತ್ತಿದ್ದರೇನೋ. ಅವರ ನಿಲುವೇ ಈಗ ಅವರಿಗೆ ಈ ಪರಿಸ್ಥಿತಿ ತಂದಿಟ್ಟಿದೆ. ಅಷ್ಟಕ್ಕೂ ಬಿಜೆಪಿ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಇದು ಕಾಂಗ್ರೆಸ್​ನ ವ್ಯವಸ್ಥಿತ ಷಡ್ಯಂತ್ರ ಎನಿಸುತ್ತದೆ. ಅಲ್ಲದೆ ಸೋನಿಯಾಗಾಂಧಿ ಕುಟುಂಬ ಸಂವಿಧಾನ ಮತ್ತು ನ್ಯಾಯಾಲಯಕ್ಕಿಂತ ದೊಡ್ಡದು ಎಂದು ಭಾವಿಸಿದಂತಿದೆ ಎಂದರು.

RELATED TOPICS:
English summary :Rahul Gandhi Lok Sabha Membership Cancelled: Why Congress Leaders Have not Moved Court So Far?

ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ
ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ
ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ
ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ
ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ
ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ
ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ
ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ
ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ
ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು
ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು
ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ  ರಿಜಿಜು ಮನವಿ
ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ ರಿಜಿಜು ಮನವಿ
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ
ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್
ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್
ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ
ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ

ನ್ಯೂಸ್ MORE NEWS...