Sun,Jul26,2026
ಕನ್ನಡ / English

ಪ್ರೀತಿಸಿ ಕೈ ಕೊಟ್ಟ ಪ್ರೇಮಿ, ವಿಷ ಸೇವಿಸಿ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ | JANATA NEWS

14 Oct 2023

ಹಾಸನ : ಪ್ರೀತಿಸಿ ಕೈ ಕೊಟ್ಟ ಪ್ರೇಮಿ, ವಿಷ ಸೇವಿಸಿ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬೆಳ್ಳೋಟ್ಟೆ ಗ್ರಾಮದಲ್ಲಿ ನಡೆದಿದೆ.

20 ವರ್ಷದ ಆಶಾ ಮೃತ ಯುವತಿ. ಬೇಲೂರಿನ ಸರ್ಕಾರಿ ವೈಡಿಡಿ ಪದವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಪದವಿ ಓದುತ್ತಿದ್ದ ಆಶಾಳನ್ನ, ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಮಂಜುನಾಥ್ ಪ್ರೀತಿ ಮಾಡುತ್ತಿದ್ದನಂತೆ.

ಆಶಾ ಜೊತೆ ಕೆಲ ದಿನ ಸುತ್ತಾಡಿ, ಇತ್ತೀಚಿಗೆ ಬೇರೊಂದು ಹುಡುಗಿ ಜೊತೆ ಮಂಜುನಾಥ ಸುತ್ತಾಡುತ್ತಿದ್ದನಂತೆ. ಈ ವಿಚಾರ ಗೊತ್ತಾಗುತ್ತಲೆ ಆಶಾ, ಆ ಹುಡುಗಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾಳೆ. ಮಂಜುನಾಥ್​ನನ್ನೂ ಪ್ರಶ್ನೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾಳೆ. 'ನನ್ನ ಬಿಟ್ಟು ಅವಳನ್ನ ಅದೇಗೆ ಇಷ್ಟಪಡ್ತೀಯ ನೋಡೋಣ ಎಂದು ಜಗಳ ಮಾಡಿದ್ದಾಳೆ. ನೀನು ನನ್ನಿಂದ ದೂರ ಆಗಬೇಕು, ಇಲ್ಲ ಎಂದರೆ ನಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಮಂಜುನಾಥ್ ಬೆದರಿಸಿದ್ದನಂತೆ. ಇದರಿಂದ ಮನನೊಂದ ಆಶಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಕೂಡಲೆ ಆಕೆಯನ್ನ ಮಂಜುನಾಥ್ ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಶಿಫ್ಟ್ ಮಾಡಲಾಗಿದೆ. ಆದ್ರೆ, ತೀವ್ರ ಅಸ್ವಸ್ಥಗೊಂಡಿದ್ದ ಆಶಾ ಚಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ. ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

RELATED TOPICS:
English summary :College student committed suicide by consuming poison

ರಾಜನಾಥ್ ಸಿಂಗ್ - ಪಾಕಿಸ್ತಾನದೊಂದಿಗೆ ಮಾತುಕತೆ ಪಿಒಕೆ ಬಗ್ಗೆ ಮಾತ್ರ; ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರಾಯೋಜಿಸುವ ದೇಶ ಒಂದೇ

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ; ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪ್ರಲ್ಹಾದ್ ಜೋಶಿಗೆ

ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರೀಯ ಐಕ್ಯತೆಯ ಕಾರಣ ನೀಡಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಸಿಜೆಪಿ ಪ್ರತಿಭಟನೆಯ ನಡುವೆ 303 ಮಿಲಿಯನ್ ವೀಕ್ಷಣೆ ದಾಟಿದ ಪ್ರಧಾನಿ ಮೋದಿ ರೀಲ್ : ಬೆಂಬಲಿಗರಿಗೆ ಧನ್ಯವಾದ

ಕೇಂದ್ರದ ಭರವಸೆಯ ನಂತರ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ

ದೆಹಲಿ ಪೊಲೀಸ್: ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪರಿಸ್ಥಿತಿ ಶಾಂತಿಯುತ

ಕರ್ನಾಟಕ ಪಶುವೈದ್ಯರ ನೇಮಕಾತಿಯಲ್ಲಿ ₹80 ಲಕ್ಷ ಲಂಚದ ಆರೋಪ; ಸ್ಟಿಂಗ್ ಆಪರೇಷನ್ ಸಾಕ್ಷ್ಯ ಬಿಡುಗಡೆ ಮಾಡಿದ ಆಕಾಂಕ್ಷಿ

ತಪ್ಪು ಮಾಹಿತಿ ಅಭಿಯಾನದ ಬಗ್ಗೆ ದೆಹಲಿ ಪೊಲೀಸರ ಎಚ್ಚರಿಕೆ; 400ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳ ಗುರುತು

ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಸಂಸದೀಯ ಸಚಿವ  ರಿಜಿಜು ಮನವಿ

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತ್ವರಿತಗತಿ ನ್ಯಾಯಾಲಯ; ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಪ್ರಧಾನಿ ಮೋದಿ

ಮುಂದಿನ ವರ್ಷದಿಂದ ನೀಟ್ ಸಂಪೂರ್ಣ ಡಿಜಿಟಲ್ ಆಗಲಿದೆ: ಧರ್ಮೇಂದ್ರ ಪ್ರಧಾನ್

ದೆಹಲಿಯಲ್ಲಿ ಪ್ರತಿಭಟನೆಯ ವೇಳೆ ಹಲವು ಪತ್ರಕರ್ತರ ಮೇಲೆ ಹಲ್ಲೆ ಆರೋಪ; ಪೊಲೀಸರಿಂದ ತನಿಖೆ

ನ್ಯೂಸ್ MORE NEWS...