Tue,Dec10,2024
ಕನ್ನಡ / English

ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಆದೇಶಿಸಿದ ಸಚಿವ ಮಧು ಬಂಗಾರಪ್ಪ | JANATA NEWS

20 Nov 2024
632

ಬೆಂಗಳೂರು : ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ಶಾಲಾ ವಿದ್ಯಾರ್ಥಿಯ ಮೇಲೆ ಗಂಭೀರ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶಿಸಿದ್ದಾರೆ. ಶಿಕ್ಷಣ ಇಲಾಖೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಭಾಗವಹಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ, ಎನ್ನಲಾಗಿದೆ.

ಸಭೆಯ ಸಂದರ್ಭದಲ್ಲಿ ವಿದ್ಯಾರ್ಥಿ ಓರ್ವ ಮಾತನಾಡಿ, "ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ", ಎಂದಿರುವುದನ್ನು ಕೇಳಿಸಿಕೊಂಡ ಸಚಿವರು ಅಧಿಕಾರಿಗಳಿಗೆ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಆ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ! ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ. ", ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಈ ಪೋಸ್ಟ್ ನಲ್ಲಿ, "ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವ ದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ., ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು," ಎಂದು ಒತ್ತಾಯಿಸಿದ್ದಾರೆ.

English summary :Minister Madhu Bangarappa ordered action against the student saying that the education minister does not know Kannada

ಕೇರಳ ಮೂಲದ ದೋಸೆ/ಇಡ್ಲಿ ಹಿಟ್ಟಿಗೆ ಅನುಕೂಲ ಮಾಡಿಕೊಡಲು, ನಂದಿನಿ ಉತ್ಪನ್ನಕ್ಕೆ ತಡೆ : ನಂದಿನಿ ಎಂಡಿ ಎತ್ತಂಗಡಿ
ಕೇರಳ ಮೂಲದ ದೋಸೆ/ಇಡ್ಲಿ ಹಿಟ್ಟಿಗೆ ಅನುಕೂಲ ಮಾಡಿಕೊಡಲು, ನಂದಿನಿ ಉತ್ಪನ್ನಕ್ಕೆ ತಡೆ : ನಂದಿನಿ ಎಂಡಿ ಎತ್ತಂಗಡಿ
ರಾಹುಲ್ ಗಾಂಧಿ ಉನ್ನತ ಮಟ್ಟದ ದೇಶದ್ರೋಹಿ - ಬಿಜೆಪಿ ಗಂಭೀರ ಆರೋಪ
ರಾಹುಲ್ ಗಾಂಧಿ ಉನ್ನತ ಮಟ್ಟದ ದೇಶದ್ರೋಹಿ - ಬಿಜೆಪಿ ಗಂಭೀರ ಆರೋಪ
ಮಹಾರಾಷ್ಟ್ರ : ನಾಳೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ದೇವೇಂದ್ರ ಫಡ್ನವೀಸ್
ಮಹಾರಾಷ್ಟ್ರ : ನಾಳೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ದೇವೇಂದ್ರ ಫಡ್ನವೀಸ್
ದಿ ಸಬರಮತಿ ರಿಪೋರ್ಟ್ - ಚಲನಚಿತ್ರವನ್ನು ಸಂಪುಟದ ಸಹೋದ್ಯೋಗಿಗಳೊಂದಿಗೆ  ವೀಕ್ಷಿಸಿದ ಪ್ರಧಾನಿ ಮೋದಿ
ದಿ ಸಬರಮತಿ ರಿಪೋರ್ಟ್ - ಚಲನಚಿತ್ರವನ್ನು ಸಂಪುಟದ ಸಹೋದ್ಯೋಗಿಗಳೊಂದಿಗೆ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬೋರ್ಡ್ ರದ್ದುಗೊಳಿಸಿದ  ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರ
ವಕ್ಫ್ ಬೋರ್ಡ್ ರದ್ದುಗೊಳಿಸಿದ ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರ
ಫೈರ್‌ಬ್ರಾಂಡ್ ಹಿಂದೂ ನಾಯಕ ಸಾಧು ಚಿನ್ಮೋಯ್ ಕೃಷ್ಣ ಬ್ರಹ್ಮಚಾರಿ ಅವರನ್ನು ಬಂಧಿಸಿದ ಬಾಂಗ್ಲಾದೇಶದ ಡಿಟೆಕ್ಟಿವ್ ಬ್ರಾಂಚ್
ಫೈರ್‌ಬ್ರಾಂಡ್ ಹಿಂದೂ ನಾಯಕ ಸಾಧು ಚಿನ್ಮೋಯ್ ಕೃಷ್ಣ ಬ್ರಹ್ಮಚಾರಿ ಅವರನ್ನು ಬಂಧಿಸಿದ ಬಾಂಗ್ಲಾದೇಶದ ಡಿಟೆಕ್ಟಿವ್ ಬ್ರಾಂಚ್
ಸಂಭಾಲ್‌ ಕಲ್ಲುತೂರಾಟದಲ್ಲಿ 4 ಸಾವು, 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯ :ಶಾಹಿ ಜಾಮಾ ಮಸೀದಿಯಲ್ಲಿ ಹೆಚ್ಚಿನ ಭದ್ರತೆ, ಶಾಲೆ, ಇಂಟರ್ನೆಟ್ ಬಂದ್
ಸಂಭಾಲ್‌ ಕಲ್ಲುತೂರಾಟದಲ್ಲಿ 4 ಸಾವು, 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯ :ಶಾಹಿ ಜಾಮಾ ಮಸೀದಿಯಲ್ಲಿ ಹೆಚ್ಚಿನ ಭದ್ರತೆ, ಶಾಲೆ, ಇಂಟರ್ನೆಟ್ ಬಂದ್
ಅವೈಜ್ಞಾನಿಕ ರೇಷನ್ ಕಾರ್ಡ್ ಪರಿಷ್ಕರಣೆ : ಒಂದೇ ಏಟಿಗೆ 2 ಗ್ಯಾರೆಂಟಿ ಯೋಜನೆ ಢಮಾರ್ - ಆರ್.ಅಶೋಕ್
ಅವೈಜ್ಞಾನಿಕ ರೇಷನ್ ಕಾರ್ಡ್ ಪರಿಷ್ಕರಣೆ : ಒಂದೇ ಏಟಿಗೆ 2 ಗ್ಯಾರೆಂಟಿ ಯೋಜನೆ ಢಮಾರ್ - ಆರ್.ಅಶೋಕ್
ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ  ಆದೇಶಿಸಿದ ಸಚಿವ ಮಧು ಬಂಗಾರಪ್ಪ
ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಆದೇಶಿಸಿದ ಸಚಿವ ಮಧು ಬಂಗಾರಪ್ಪ
ಸಿನಿಮೀಯ ರೀತಿಯಲ್ಲಿ ಪಾಕ್ ಏಜೆನ್ಸಿ ಕೈಯಿಂದ ಏಳು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್
ಸಿನಿಮೀಯ ರೀತಿಯಲ್ಲಿ ಪಾಕ್ ಏಜೆನ್ಸಿ ಕೈಯಿಂದ ಏಳು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್
ಅಮೆರಿಕ ಫೆಡರಲ್ ಅಧಿಕಾರಶಾಹಿ ಶುದ್ಧೀಕರಿಸಲು ಮಸ್ಕ್ ಜೊತೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
ಅಮೆರಿಕ ಫೆಡರಲ್ ಅಧಿಕಾರಶಾಹಿ ಶುದ್ಧೀಕರಿಸಲು ಮಸ್ಕ್ ಜೊತೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ, ಕೆಟಿಪಿಪಿ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ - ಆರ್. ಅಶೋಕ
ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ, ಕೆಟಿಪಿಪಿ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ - ಆರ್. ಅಶೋಕ

ನ್ಯೂಸ್ MORE NEWS...