ಸಿನಿಮಾ ಶೂಟಿಂಗ್ ವೇಳೆ ಅವಘಡ, ನಟಿ ಸಂಯುಕ್ತಾಗೆ ಪೆಟ್ಟು! | Filmz news
: ಕಂಠೀರವಾ ಸ್ಟುಡಿಯೋದಲ್ಲಿ ಸೆಟ್ನಲ್ಲಿ ಕ್ರೀಮ್ ಚಿತ್ರದ ಫೈಟಿಂಗ್ ಸೀನ್ ವೇಳೆ ಸಂಯುಕ್ತಾ ಹೆಗಡೆ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಹಸ ನಿರ್ದೇಶಕ ಪ್ರಭು, ಸಂಯುಕ್ತಾಗೆ ಡ್ಯೂಪ್ ಬಳಸಲು ಒತ್ತಾಯಿಸಿದರೂ, ಅವರು ಒಪ್ಪಿರಲಿಲ್ಲ.
ಬದಲಾಗಿ ತಾವೇ ಖುದ್ದಾಗಿ ಸ್ಟಂಟ್ ಮಾಡಲು ಮುಂದಾಗಿದ್ದು, ಸಾಹಸ ಕಲಾವಿದರ ಜತೆ ಫೈಟ್ ಮಾಡುವ ವೇಳೆ ಜಾರಿ ಬಿದ್ದು ಕಾಲು ಉಳುಕಿಸಿಕೊಂಡಿದ್ದಾರೆ.
ಸಂಯುಕ್ತಾ ಅವರ ಕಾಲಿಗೆ ಪೆಟ್ಟಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರಿಗೆ 15 ದಿನಗಳ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ.
English summary :Actress samyuktha hegde was injured in an accident during the shooting of the movie!