ಕಾಂತಾರ ಸಿನಿಮಾ ನೋಡಿ ಪತ್ರವನ್ನ ಹಂಚಿಕೊಂಡ ಕಿಚ್ಚ ಸುದೀಪ್! | Filmz news

2022-10-08
4777
Kichcha Sudeep shared the letter after watching Kantara movie!

: ಕಾಂತಾರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ನಟ ಕಿಚ್ಚ ಸುದೀಪ್ ಕೂಡ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾರೆ.

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ನೋಡಿ ಅಭಿಯನ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಎಂದು ಕ್ಯಾಪಿಟಲ್ ಲೆಟರ್​ನಲ್ಲಿ ಕ್ಯಾಪ್ಶನ್ ಕೊಟ್ಟ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಬರೆದಿರುವ ಪತ್ರದಲ್ಲಿ ಏನಿದೆ?

ಪತ್ರವನ್ನು ಬರೆಯುವಂತೆ ಮಾಡಿದ ತಂಡಕ್ಕೆ ನನ್ನ ಈ ಪತ್ರ..
ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ, ಕೆಲವು ಅದ್ಭುತವಾಗಿರುತ್ತವೆ. ಆದರೆ, ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುವುದು ಬಹಳ ಅಪರೂಪ. ಆದರೆ ಅಪರೂಪಕ್ಕೆ ನಮ್ಮನ್ನು ಮಂತ್ರಮುಗ್ಧಗೊಳಿಸುವ ಸಿನಿಮಾ ನೋಡುತ್ತೇವೆ. ಅಂತಹ ಒಂದು ಸಿನಿಮಾ ಆಗಿರುವ ಕಾಂತಾರ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಸಿಂಪಲ್ ಪ್ಲಾಟ್, ಅಸಾಧಾರಣ ರೀತಿಯಲ್ಲಿ ಬರೆದ, ಫೆಂಟಾಸ್ಟಿಕ್ ಆಗಿ ಮಾಡಲಾಗಿದೆ.

ಕಾಂತಾರ ಅಂಥದ್ದೊಂದು ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ. ರಿಷಬ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸನ್ನು ಗೆದ್ದಿದ್ದಾರೆ.

ಯಾರಾದರೂ ಈ ರೀತಿಯಾಗಿ ಹೇಗೆ ಯೋಚಿಸಲು ಸಾಧ್ಯ ಎಂದು ಅಚ್ಚರಿ ಪಡುವುದಷ್ಟೇ ನಿಮ್ಮ ಕೆಲಸ. ಪರದೆ ಮೇಲೆ ತೋರಿಸಿದ ರೀತಿಯ ಅರ್ಧದಷ್ಟಾದರೂ ಈ ಪ್ಲಾಟ್ ಪೇಪರ್ ಮೇಲಿದ್ದರೂ ಅದು ಅಚ್ಚರಿ. ಕ್ಲೈಮ್ಯಾಕ್ಸ್ ಪೇಪರ್​​ನಲ್ಲಿ ಕೂಡಾ ಪೇಪರ್ ನಲ್ಲಿ ಅದೊಂದು ಸಾಮಾನ್ಯ ಎಂಡಿಂಗ್ ಆಗಿರುತ್ತಿತ್ತು. ಇದು ನಿರ್ದೇಶಕರ ದೃಷ್ಟಿ. ನಿರ್ದೇಶಕ ಕಲ್ಪಿಸಿಕೊಂಡಂತೆ ಸಿನಿಮಾ ಸಿದ್ಧವಾಗಿದೆ. ಇದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ.

ಇಂಥದ್ದೊಂದು ಅಸಾಧಾರಣ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ರಿಷಬ್ ಶೆಟ್ಟಿಗೆ ನನ್ನ ಮೊದಲ ಮೆಚ್ಚುಗೆ. ಅವರ ಮೇಲೆ ನಂಬಿಕೆ ಇಟ್ಟು, ಇಂಥದ್ದೊಂದು ಚಿತ್ರವನ್ನು ರೂಪಿಸಿರುವುದಕ್ಕೆ ಕಾರಣರಾದ ಚಿತ್ರತಂಡದವರೆಲ್ಲರಿಗೂ ನನ್ನ ಅಭಿನಂದನೆ.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಜಕ್ಕೂ ಒಬ್ಬ ಅಪ್ರತಿಮ ಸಂಗೀತ ನಿರ್ದೇಶಕ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈ ಚಿತ್ರದ ಮೇಲೆ ನಂಬಿಕೆ ಇಟ್ಟು, ಇದನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಸಂಸ್ಥೆಗೂ ನನ್ನ ಶುಭಾಶಯಗಳು.

ಕಾಂತಾರ ಚಿತ್ರ ನೋಡಿದವರು ನೀಡಿದ ಪ್ರತಿಕ್ರಿಯೆಗಳಿಗೆ ತಕ್ಕ ಹಾಗೆ ಚಿತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆಯಾ ಎಂಬ ಕುತೂಹಲದಿಂದ ಚಿತ್ರ ನೋಡಿದೆ. ಚಿತ್ರ ಚೆನ್ನಾಗಿ ಮೂಡಿಬಂದಿರುವುದಷ್ಟೇ ಅಲ್ಲ, ನಮ್ಮ ನಿರೀಕ್ಷೆಗಳನ್ನೂ ಮೀರಿ ಅದ್ಭುತವಾಗಿದೆ ಎಂದು, ಕಿಚ್ಚ ಸುದೀಪ್ ಬರೆದಿದ್ದಾರೆ.

English summary :Kichcha Sudeep shared the letter after watching Kantara movie!

ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದ ಕಾರಣ ಗದ್ದಲ
ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದ ಕಾರಣ ಗದ್ದಲ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿ, ಮಂತ್ರಿಮಂಡಲ ವಜಾ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿ, ಮಂತ್ರಿಮಂಡಲ ವಜಾ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಅರ್ಮೇನಿಯಾ ಮಿಲಿಟರಿ ಮೆರವಣಿಗೆಯಲ್ಲಿ ಭಾರತೀಯ ಮೂಲದ ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಪ್ರದರ್ಶನ
ಅರ್ಮೇನಿಯಾ ಮಿಲಿಟರಿ ಮೆರವಣಿಗೆಯಲ್ಲಿ ಭಾರತೀಯ ಮೂಲದ ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಪ್ರದರ್ಶನ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆಯನ್ನು ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆಯನ್ನು ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
3 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಹೊಸ ಸಿಎಂ
3 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಹೊಸ ಸಿಎಂ
ಅಂತಾರಾಷ್ಟ್ರೀಯ ಗಡಿಗಳ ಬಳಿಯ ಅಕ್ರಮ ರಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಮಿತ್ ಶಾ ಆದೇಶ
ಅಂತಾರಾಷ್ಟ್ರೀಯ ಗಡಿಗಳ ಬಳಿಯ ಅಕ್ರಮ ರಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಮಿತ್ ಶಾ ಆದೇಶ
ಅಸ್ಸಾಂ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆ, 2026 ಅನ್ನು ಅಂಗೀಕರಿಸಿದೆ
ಅಸ್ಸಾಂ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆ, 2026 ಅನ್ನು ಅಂಗೀಕರಿಸಿದೆ
ಕರ್ನಾಟಕದಲ್ಲಿ ಶೀಘ್ರದಲ್ಲೇ ಹೊಸ ಸಿಎಂ ಮತ್ತು ನಾಲ್ವರು ಡಿಸಿಎಂಗಳ ನೇಮಕ ಸಾಧ್ಯತೆ?
ಕರ್ನಾಟಕದಲ್ಲಿ ಶೀಘ್ರದಲ್ಲೇ ಹೊಸ ಸಿಎಂ ಮತ್ತು ನಾಲ್ವರು ಡಿಸಿಎಂಗಳ ನೇಮಕ ಸಾಧ್ಯತೆ?
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ರಣವೀರ್ ಸಿಂಗ್ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ರಣವೀರ್ ಸಿಂಗ್ ಪ್ರಾರ್ಥನೆ ಸಲ್ಲಿಸಿದರು.
ಪೋರ್ಟಲ್‌ನಲ್ಲಿ ವಕ್ಫ್ ಮಂಡಳಿ ಅಕ್ರಮವಾಗಿ ಅಪ್‌ಲೋಡ್ ಮಾಡಲಾದ ಆಸ್ತಿಗಳನ್ನು ತೆಗೆದುಹಾಕಲು ಕೇಂದ್ರಕ್ಕೆ ರಾಜೀವ್ ಚಂದ್ರಶೇಖರ್ ಮನವಿ
ಪೋರ್ಟಲ್‌ನಲ್ಲಿ ವಕ್ಫ್ ಮಂಡಳಿ ಅಕ್ರಮವಾಗಿ ಅಪ್‌ಲೋಡ್ ಮಾಡಲಾದ ಆಸ್ತಿಗಳನ್ನು ತೆಗೆದುಹಾಕಲು ಕೇಂದ್ರಕ್ಕೆ ರಾಜೀವ್ ಚಂದ್ರಶೇಖರ್ ಮನವಿ
ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ: 3ನೇ ಸ್ಥಾನದಲ್ಲಿ ಆಸೀನರಾಗಿದ್ದ ಎಚ್‌ಡಿ ಕುಮಾರಸ್ವಾಮಿ
ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ: 3ನೇ ಸ್ಥಾನದಲ್ಲಿ ಆಸೀನರಾಗಿದ್ದ ಎಚ್‌ಡಿ ಕುಮಾರಸ್ವಾಮಿ
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ಕೋಮುಗಲಭೆ ಪ್ರಕರಣ ಸೇರಿ ಒಟ್ಟು 52 ಕ್ರಿಮಿನಲ್‌ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ : ಬಿಜೆಪಿ ಆಕ್ರೋಶ
ಕೋಮುಗಲಭೆ ಪ್ರಕರಣ ಸೇರಿ ಒಟ್ಟು 52 ಕ್ರಿಮಿನಲ್‌ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ : ಬಿಜೆಪಿ ಆಕ್ರೋಶ
ಮದರಸಾಗಳಲ್ಲಿಯೂ ವಂದೇ ಮಾತರಂ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ
ಮದರಸಾಗಳಲ್ಲಿಯೂ ವಂದೇ ಮಾತರಂ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ
ಪ್ರಧಾನಿ ವಿದೇಶ ಪ್ರವಾಸದ ಉದ್ದೇಶ ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ರಾಹುಲ್ ಗಾಂಧಿಗೆ ಇಲ್ಲ - ವಿದೇಶಾಂಗ ಸಚಿವ ಎಸ್. ಜೈಶಂಕರ್
ಪ್ರಧಾನಿ ವಿದೇಶ ಪ್ರವಾಸದ ಉದ್ದೇಶ ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ರಾಹುಲ್ ಗಾಂಧಿಗೆ ಇಲ್ಲ - ವಿದೇಶಾಂಗ ಸಚಿವ ಎಸ್. ಜೈಶಂಕರ್

ಫೋಟೋ ಗ್ಯಾಲಾರಿ MORE PHOTO...