ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ; ನಟ ಚೇತನ್! | Filmz news
: ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರಕ್ಕೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚೇತನ್ ಹೇಳಿರುವ ಮಾತು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಚರ್ಚೆಗಳಾಗುತ್ತಿವೆ.
ರಿಷಬ್ ಶೆಟ್ಟಿಯವರು ಮಾಧ್ಯಮ ಸಂದರ್ಶನ ನೀಡುವಾಗ ಕಾಂತಾರ ಸಿನಿಮಾದಲ್ಲಿ ಬಳಸಿರುವ ಭೂತಕೋಲ ಆಚರಣೆಯು ಹಿಂದು ಸಂಸ್ಕೃತಿಯ ಆಚರಣೆ ಎಂದು ಹೇಳಿಕೆ ನೀಡಿದ್ದರು. ಇದನ್ನು ನಟ ಚೇತನ್ ವಿರೋಧಿಸಿದ್ದಾರೆ.
ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಚೇತನ್, ನಮ್ಮ ಕನ್ನಡದ ಚಲನಚಿತ್ರ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದು ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.
ಆದರೆ, ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದು ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದಿದ್ದಾರೆ.
ಭೂತಕೋಲ ಮೂಲ ನಿವಾಸಿ ಸಂಸ್ಕೃತಿ. ಇದು ಹಿಂದೂ ಧರ್ಮದ ಒಳಗೆ ಎನ್ನುವುದು ತಪ್ಪು. ಪಂಬದ, ಕೊರಗ ಸೇರಿದಂತೆ ಅನೇಕ ಮೂಲ ನಿವಾಸಿಗಳಿಗೆ ಅವರದೇ ಆದ ಪ್ರತ್ಯೇಕ ಸಂಪ್ರದಾಯವಿದೆ. ಆದರೆ ಹಿಂದೂ ಧರ್ಮ ಬುಡಕಟ್ಟು ಸಂಸ್ಕೃತಿಯನ್ನು ಸೇರಿಸಿಕೊಂಡು ನಮ್ಮದು ಎನ್ನುತ್ತಿದೆ. ಭೂತಕೋಲ, ಪ್ರಕೃತಿ, ಪರಿಸರ ಆರಾಧನೆಯನ್ನು ಆದಿ ನಿವಾಸಿಗಳು ಆಚರಣೆ ಮಾಡಿಕೊಂಡಿದ್ದರು. ಆದರೆ ವೈದಿಕ ಪರಂಪರೆ ಬಂದಮೇಲೆ ಇದೂ ಕೂಡ ನಮ್ಮದೆ ಎಂದು ಸೇರಿಸಿಕೊಂಡಿದ್ದಾರೆ. ವೈದಿಕತೆ ಮತ್ತು ಮೂಲನಿವಾಸಿಗೂ ವ್ಯತ್ಯಾತವಿದೆ ಎಂದು ಚೇತನ್ ಹೇಳಿದ್ದಾರೆ.