ಯಾರ ಜಾತಿಯ ಪತ್ತೆ ಇಲ್ಲವೋ ಅವರು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಾರೆ : ರಾಹುಲ್ ಗಾಂಧಿಗೆ ಪರೋಕ್ಷ ಲೇವಡಿ ಮಾಡಿದ ಠಾಕೂರ್ | JANATA NEWS

ನವದೆಹಲಿ : ಆಡಳಿತ ಪಕ್ಷದ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಇಂದು ಬಜೆಟ್ ಅಧಿವೇಶನದಲ್ಲಿ ಜಾತಿ ಜನಗಣತಿ ಮತ್ತು ಒಬಿಸಿ ಕುರಿತು ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡರು.
"ಯಾರ ಜಾತಿಯ ಪತ್ತೆ ಇಲ್ಲವೋ ಅವರು ಜಾತಿ ಜನಗಣತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸದನದಲ್ಲಿಯೇ ಮಾಜಿ ಪ್ರಧಾನಿ ಆರ್‌ಜಿ-1 ಒಬಿಸಿಗಳಿಗೆ ಮೀಸಲಾತಿಯನ್ನು ವಿರೋಧಿಸಿದ್ದರು, ಎಂಬುದನ್ನು ನಾನು ಸ್ಪೀಕರ್‌ಗೆ ನೆನಪಿಸಲು ಬಯಸುತ್ತೇನೆ" ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಸದನದಲ್ಲಿ ಹೇಳಿದರು.
"ಒಬಿಸಿ ಮಾತುಗಳು, ಜಾತಿ ಗಣತಿ ಮಾತುಗಳು ಹಲವು ಬಾರಿ ನಡೆಯುತ್ತಿವೆ...ಯಾರ ಜಾತಿಯ ಪತ್ತೆ ಇಲ್ಲವೋ ಅವರು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಾರೆ. ಈ ಸದನದಲ್ಲಿಯೇ ಮಾಜಿ ಪ್ರಧಾನಿ ಆರ್‌ಜಿ-1 ಒಬಿಸಿಗಳಿಗೆ ಮೀಸಲಾತಿಯನ್ನು ವಿರೋಧಿಸಿದ್ದರು ಎಂಬುದನ್ನು ನಾನು ಸ್ಪೀಕರ್‌ಗೆ ನೆನಪಿಸಲು ಬಯಸುತ್ತೇನೆ" ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಸದನದಲ್ಲಿ ಹೇಳಿದರು.
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ತಮಗೆ "ಅವಮಾನ ಮತ್ತು ನಿಂದನೆ" ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ. ಜಾತಿ ಗೊತ್ತಿಲ್ಲದವರು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಾರೆ ಎಂಬ ಠಾಕೂರ್ ಲೇವಡಿ ಮಾಡಿದಕ್ಕೆ ಪ್ರತಿಕ್ರಿಯಿಸಿದ ಗಾಂಧಿ, “ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು. ಆದರೆ, ನಾವು ಇಲ್ಲಿ ಜಾತಿ ಜನಗಣತಿ ಪಾಸ್ ಮಾಡಿ ತೋರಿಸುತ್ತೇವೆ ಎಂಬುದನ್ನು ಮರೆಯಬೇಡಿ", ಎಂದು ಸವಾಲು ಹಾಕಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ಸದಸ್ಯರು ‘ಹಾಗಾದರೆ ಅದರಲ್ಲಿ ನಿಮ್ಮ ಜಾತಿಯನ್ನೂ ನಮುದಿಸಬೇಕಾಗುತ್ತದೆ’ ಎಂದು ಉತ್ತರಿಸಿದರು.
VIDEO | Monsoon Session: “Those whose caste is not known, talks about the caste census. I want to remind the Speaker that in this House itself, a former prime minister RG-1 had opposed reservation for OBCs,” says BJP MP Anurag Thakur (@ianuragthakur) in Lok Sabha.
— Press Trust of India (@PTI_News) July 30, 2024
“You can… pic.twitter.com/MPaFnDECB8