ಹಲಸಿನ ಹಣ್ಣಿನಿಂದ ಎಷ್ಟೊಂದು ಖಾಯಿಲೆ ದೂರ ಮಾಡಬಹುದು ತಿಳಿದುಕೊಳ್ಳಿ! | Janata news
ಬೆಂಗಳೂರು : ಈ ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಇರುತ್ತದೆ. ಆದ್ದರಿಂದಲೇ ಹಲಸು ಉಂಡು ಮಾವು ಅಂತ ಗಾದೆ ಮಾತಿದೆ. ಹಲಸಿನಲ್ಲಿ ಸೆರೋಟಿನ್, ಬೀಟಾ ಕ್ಯಾರೋಟಿನ್, ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಅಂಶಗಳನ್ನು ಒಳಗೊಂಡಿದೆ.
ಹಲಸು ಕೇವಲ ರುಚಿಯ ಹಣ್ಣಷ್ಟೆ ಅಲ್ಲ, ಔಷಧವಾಗಿಯೂ ಪ್ರಸಿದ್ಧಿ. ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಇದರ ಪ್ರತಿ ಭಾಗವೂ ಔಷಧದ ಗುಣ ಹೊಂದಿದೆ.
ಉಪಯೋಗಗಳು -
- ಈ ಹಣ್ಣಿನಲ್ಲಿರುವ ಅಧಿಕ ಮ್ಯಾಗ್ನೆಷಿಯಂ ಮತ್ತು ಕ್ಯಾಲ್ಶಿಯಂ ಅಂಶವಿರುವುದರಿಂದ ಮೂಳೆಗಳನ್ನು ಗಟ್ಟಿಯಾಗಿಸುವುತ್ತದೆ.
- ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು, ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ.
- ವಯಸ್ಥಾಪಕ ಗುಣಅಂದರೆ ಮುಪ್ಪನ್ನು ಮುಂದೂಡುವ ಗುಣವನ್ನು ಹೊಂದಿದೆ.
- ಈ ಹಣ್ಣನ್ನು ನಿತ್ಯವೂ ನಿಯಮಿತವಾಗಿ ಸೇವಿಸಿದರೆ ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್ಗಳು ಕ್ಯಾನ್ಸರ್ನಲ್ಲಿ ಪ್ರತಿಬಂಧಕವಾಗಿ ಕಾರ್ಯವೆಸಗುತ್ತದೆ .
- ಅಧಿಕ ವಿಟಮಿನ್ ಎ ಇರುವುದರಿಂದ ಕಣ್ಣಿನ ತೊಂದರೆಗಳಿಗೆ ಮುಖ್ಯವಾಗಿ ಇರುಳುಗಣ್ಣು ತೊಂದರೆಗಳಿಗೆ ಉತ್ತಮ .
- ಹಲಸಿನ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್ ಮತ್ತು ಫ್ರುಕ್ಟೋಸ್ ನಿಮ್ಮ ಶಕ್ರಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.
- ಇದರಲ್ಲಿರುವ ತಾಮ್ರದ ಅಂಶ ಥೈರಾಯಿಡ್ ತೊಂದರೆಗಳಿಗೆ ಹಿತಕರ .
- ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ.
- ಜ್ವರ ಮತ್ತು ಭೇದಿ ಉಂಟಾದಾಗ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಗುಣಕಾರಿ.
- ಹಲಸಿನ ಹಣ್ಣಿನ ಬೇರುಗಳು ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಮಬಾಣವಾಗಿದೆ. ಇದರ ಬೇರನ್ನು ಮತ್ತು ಉಳಿದ ಭಾಗಗಳನ್ನು ಕುದಿಸಿ ಕಷಾಯದಂತೆ ಸೇವಿಸುವುದು ಅಸ್ತಮಾದಿಂದ ಮುಕ್ತಿ ದೊರಕುವಂತೆ ಮಾಡುತ್ತದೆ.