ಮನೆಯಲ್ಲಿಯೇ ಈಜಿ ಆಗಿ ಬೀಟ್‍ರೂಟ್ ಹಲ್ವಾ ಮಾಡಿ.. ರೆಸಿಪಿಗಾಗಿ ಕ್ಲಿಕ್ ಮಾಡಿ | Janata news
![How to make beetroot halwa recipe](2021/March/Jimg/1614754969.jpg)
ಬೆಂಗಳೂರು : ಬೀಟ್‍ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು:
* ಬೀಟ್‍ರೂಟ್ - 4
* ಹಾಲು - 2 ಕಪ್
* ಸಕ್ಕರೆ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು
* ಏಲಕ್ಕಿ ಪುಡಿ - 1 ಟೀ ಚಮಚ
* ತುಪ್ಪ - 3 ಟೇಬಲ್ ಚಮಚ
* ಗೋಡಂಬಿ - ಸ್ವಲ್ಪ
* ಬಾದಾಮಿ - ಸ್ವಲ್ಪ
* ಕೋವಾ - 100 ಗ್ರಾಂ
* ಮಂದಗೊಳಿಸಿದ ಹಾಲು - ಸ್ವಲ್ಪ
ತಯಾರಿಸುವ ವಿಧಾನ :
1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ಸುಲಿದು ಕಿಸಿಕೊಳ್ಳಿ.
2. ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.
4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.
5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಕಲೆಸಿ.
8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.
9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.
10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ. ಈಗ ಬೀಟ್‍ರೂಟ್ ಹಲ್ವಾ ಬಡಿಸಲು ಸಿದ್ಧ