ಗಣೇಶನಿಗೆ ಪ್ರಿಯವಾದ ಮೋದಕ ಮಾಡುವುದು ಹೇಗೆ? | ಜನತಾ ನ್ಯೂಸ್
ಬೆಂಗಳೂರು : ಮೋದಕ ಗಣೇಶನಿಗೆ ಅತ್ಯಂತ ಪ್ರಿಯವಾದುದಾಗಿದೆ. ಮುದ ಎಂದರೆ ಆನಂದ ಎಂಬ ಅರ್ಥ. ಮೋದಕವು ಗಣೇಶನಿಗೆ ಆನಂದವನ್ನು ಮತ್ತು ಭಕ್ತರಿಗೆ ಜ್ಞಾನವನ್ನು ನೀಡುವ ಸಿಹಿ ತಿಂಡಿ ಎನ್ನಲಾಗಿದೆ. ಗಣೇಶ ಹಬ್ಬದೊಂದು ಇಪತ್ತೊಂದು ಮೋದಕವನ್ನು ಮಾಡುತ್ತೇವೆ. ಗಣೇಶನಿಗೆ ಮೋದಕವು ಅತ್ಯಂತ ಇಷ್ಟವಾದ್ದರಿಂದ ಗಣೇಶನಿಗೆ ಮೋದಕಪ್ರಿಯ ಎಂದೇ ಕರೆಯುತ್ತೇವೆ.
- ಮೊದಲನೆಯದಾಗಿ, ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ 1½ ಕಪ್ ಮೈದಾ, 2 ಟೇಬಲ್ಸ್ಪೂನ್ ರವೆ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
- ಎಲ್ಲವನ್ನೂ ಚೆನ್ನಾಗಿ ಚೆನ್ನಾಗಿ ಮಿಶ್ರಣ ಮಾಡಿ, ಹಿಟ್ಟಿನ ಮೇಲೆ 2 ಟೇಬಲ್ಸ್ಪೂನ್ ಬಿಸಿ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ನಂತರ ಅಗತ್ಯವಿರುವಂತೆ ನೀರು ಸೇರಿಸಿ ಹಿಟ್ಟನ್ನು ನಾದಿಕೊಳ್ಳಿ, 20 ನಿಮಿಷಗಳ ಕಾಲ ಮುಚ್ಚಿಡಿ.
ಮಿಶ್ರಣವನ್ನು ಮಾಡುವ ವಿಧಾನ:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ 1 ಕಪ್ ತೆಂಗಿನಕಾಯಿ, ½ ಕಪ್ ಬೆಲ್ಲ ಸೇರಿಸಿ, ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಹುರಿದುಕೊಳ್ಳಿ.
- 2 ಟೇಬಲ್ಸ್ಪೂನ್ ಗೋಡಂಬಿ, 2 ಟೇಬಲ್ಸ್ಪೂನ್ ಬಾದಾಮಿ, 2 ಟೇಬಲ್ಸ್ಪೂನ್ ಒಣದ್ರಾಕ್ಷಿ, ½ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ಮೋದಕ ಮಾಡುವ ವಿಧಾನ
- ಹಿಟ್ಟನ್ನು ಸ್ವಲ್ಪ ನಾದಿ ಸಣ್ಣ ಚೆಂಡನ್ನು ತೆಗೆದು ಚಪ್ಪಟೆ ಮಾಡಿ, ಆಕಾರದಲ್ಲಿ ಲಟ್ಟಿಸಿಕೊಳ್ಳಿ.
- ತಯಾರಾದ ಸ್ಟಫಿಂಗ್ ನ ಒಂದು ಚಮಚವನ್ನು ಮಧ್ಯದಲ್ಲಿ ಇರಿಸಿ, ಅಂಚುಗಳನ್ನು ನಿಧಾನವಾಗಿ ಮಡಚಿಕೊಳ್ಳಿ.
- ಮಧ್ಯಮ ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ, ನಿಮ್ಮ ಮೋದಕ ರೆಡಿ.