ಹೊಸ ವಷಕ್ಕೆ ಈಜಿಯಾಗಿ ಮನೆಯಲ್ಲೇ ಕೇಕ್ ತಯಾರಿಸಿ. | Janata news
ಬೆಂಗಳೂರು : ಹೊಸ ವರ್ಷಾಚರಣೆಗೆ ಮನೆಯಲ್ಲಿ ಓವನ್ ಇಲ್ಲದೇ ಕೇಕ್ ತಯಾರಿಸುವುದು ಹೇಗೆ ಎನ್ನುವುದನ್ನ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು:
ಮೈದಾಹಿಟ್ಟು-100 ಗ್ರಾಂ,
ಪುಡಿ ಸಕ್ಕರೆ-100 ಗ್ರಾಂ,
ಬೆಣ್ಣೆ-100 ಗ್ರಾಂ,
ಮೊಟ್ಟೆಗಳು-2,
ಕೋಕೊಪುಡಿ-2 ಚಮಚ,
ಅಡುಗೆ ಸೋಡ 1/4 ಚಮಚ,
ಬೇಕಿಂಗ್ ಪೌಡರ್-3/4 ಚಮಚ,
ಚಾಕೊಲೇಟ್ ಎಸೆನ್ಸ್-1/2 ಚಮಚ,
ಕಾರ್ನ್ ಫ್ಲೋರ್-1 ಚಮಚ,
ಹಾಲಿನ ಪೌಡರ್-4 ಚಮಚ,
ಉಪ್ಪು-1 ಚಿಟಕಿ,
ಹಾಲು-ಸಾಕಷ್ಟು.
ತಯಾರಿಸುವ ವಿಧಾನ:
ಮೈದಾ, ಬೇಕಿಂಗ್ ಪೌಡರ್, ಸೋಡಾ, ಕಾರ್ನ್ ಫ್ಲೋರ್, ಉಪ್ಪು ಮತ್ತು ಕೋಕೊ ಪುಡಿ, ಹಾಲಿನ ಪೌಡರ್ ಯನ್ನು ಜರಡಿ ಮಾಡಿ ಇಟ್ಟುಕೊಳ್ಳಿ.
ಬೆಣ್ಣೆ ಮತ್ತು ಸಕ್ಕರೆಯನ್ನು ಹಗುರವಾಗಿ ತುಂಬಾ ಮೃದುವಾಗುವಂತೆ ಮಿಶ್ರ ಮಾಡಿ.
ನಂತರ ಮೊಟ್ಟೆಯನ್ನು ಸೇರಿಸಿ ಸರಿಯಾಗಿ ಬೀಟ್ ಮಾಡಿ.
ಎಸೆನ್ಸ್ ಮತ್ತು ಬಣ್ಣ ಸೇರಿಸಿ ಚೆನ್ನಾಗಿ ಬೀಟ್ ಮಾಡಿ, ಸರಿಯಾಗಿ ಬೀಟ್ ಮಾಡಿದ್ದಲ್ಲಿ ಮೃದುವಾಗಿ ಬರುತ್ತದೆ.
ಜರಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಕಲಸಿ, ಕ್ರಮವಾಗಿ ಹಾಲನ್ನು ಬೆರೆಸಿ ಡ್ರಾಪಿಂಗ್ (ಮಧ್ಯಮ ತೆಳ್ಳಗೆ ) ಹದ ಬರುವಂತೆ ಕಲಸಿಕೊಳ್ಳಿ.
ನಂತ್ರ ಬೆಣ್ಣೆ ಹೆಚ್ಚಿಟ್ಟುಕೊಂಡ ಪಾತ್ರೆಗೆ ಸುರಿಯಿರಿ.
ಮೈಕ್ರೊ ನಲ್ಲಿ -
5 ನಿಮಿಷ ಸಮಯ ಹೊಂದಿಸಿ ಮೈಕ್ರೊ ಹೈ ಮಾಡಿರಿ. ನಂತರ ಅಚ್ಚಿನಿಂದ ತೆಗೆದು ತಣ್ಣಗೆ ಮಾಡಿ. ಓವನನ್ನು 180 ಡಿಗ್ರಿ ಗೆ ಸೆಟ್ ಮಾಡಿ 40 ನಿಮಿಷಗಳವರೆಗೆ ಕೇಕನ್ನು ಬೇಯಿಸಿ 5 ನಿಮಿಷ ತಣ್ಣಗೆ ಮಾಡಿ. ನಂತರ ತೆಗೆದು ಚಾಕೋಲೇಟ್ ನಿಂದ ಅಲಂಕರಿಸಿ.
ಕುಕ್ಕರ್ ನಲ್ಲಿ -
ಕುಕ್ಕರ್ಗೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬಿಸಿ ಮಾಡಿ. ಕೇಕು ಪೇಸ್ಟ್ ಇರುವ ಬೌಲ್ ಬಿಸಿ ಕುಕ್ಕರ್ನಲ್ಲಿಟ್ಟು ಇಪ್ಪತ್ತೈದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ತೆಗೆದು ಅಲಂಕರಿಸಿ.