ಎಗ್ ಬೋಂಡಾ ಹೇಗೆ ಮಾಡೋದು ಗೊತ್ತಾ? | Janata news
ಬೆಂಗಳೂರು : ಬೇಕಾಗುವ ಪದಾರ್ಥ :
4 ಬೇಯಿಸಿದ ಮೊಟ್ಟೆ
ಅರ್ಧ ಚಮಚ ಮೆಣಸಿನ ಪುಡಿ
ಅರ್ಧ ಲೋಟ ಕಡಲೆ ಹಿಟ್ಟು
ಕಾಲು ಚಮಚ ಜೀರಿಗೆ ಪುಡಿ
ಅರ್ಧ ಲೋಟ ಮೊಸರು
ಅರ್ಧ ಲೋಟ ಬಿಸಿ ನೀರು
ಕರಿಯಲು ತುಪ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
- ಬೇಯಿಸಿದ ಮೊಟ್ಟೆಯನ್ನು ಬಿಡಿಸಿಕೊಂಡು ಮಧ್ಯ ಕತ್ತರಿಸಿಕೊಳ್ಳಿ.
- ಕತ್ತರಿಸಿಕೊಂಡ ಮೊಟ್ಟೆಯನ್ನು ಬಿಸಿ ಮಾಡಿದ ತುಪ್ಪದಲ್ಲಿ ಅದ್ದಿ ಮುಚ್ಚಿಡಿ.
- ಇನ್ನೊಂದು ಪಾತ್ರೆಗೆ ಕಡಲೆ ಹಿಟ್ಟು, ಸ್ವಲ್ಪ ಬಿಸಿ ನೀರು, ಮೊಸರು, ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪನ್ನು ಹಾಕಿ ಸರಿಯಾಗಿ ಕಲಸಿಕೊಳ್ಳಿ.
- ಬಾಣೆಲೆಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ.
- ನಂತರ ಮೊಟ್ಟೆ ಚೂರನ್ನು ಮಿಶ್ರಣದಲ್ಲಿ ಅದ್ದಿ ಬಾಣಲೆಗೆ ಬಿಡಿ.
- ಕೆಂಪಗಾಗುವವರೆಗೆ ಕರಿದು ತೆಗೆಯಿರಿ. (ಸ್ವಲ್ಪ ಹುಷಾರಾಗಿ ಕರೆಯಿರಿ).
ತಟ್ ಅಂತ ರೆಡಿ ಆಗುತ್ತೆ ಬಿಸಿ ಬಿಸಿ ಎಗ್ ಪಕೋಡ, ಇದನ್ನು ಸಾಸ್ ಅಥವಾ ಚಟ್ನಿ ಜೊತೆ ಸವಿಯಿರಿ .....