ಸ್ವಾದಿಷ್ಠಕರವಾದ ಮೂಲಂಗಿ ಪರೋಟಾ ತಯಾರಿಸುವ ವಿಧಾನ! | Janata news
ಬೆಂಗಳೂರು : ಬೇಕಾಗುವ ಪದಾರ್ಥಗಳು:
ತುರಿದ ಮೂಲಂಗಿ -1 ಕಪ್
ಒಂದು ಚಮಚ ಚಾಟ್ ಮಸಾಲಾ
2 ಕಪ್ ಗೋಧಿ ಹಿಟ್ಟು
2 ಚಮಚ ತುಪ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಈರುಳ್ಳಿ- 1
ಹಸಿ ಮೆಣಸಿನ ಕಾಯಿ -೧ ರಿಂದ ೨
ಜೀರಿಗೆ 1 ಚಮಚ
ಸ್ವಲ್ಪ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
- ಗೋಧಿ ಹಿಟ್ಟಿಗೆ ಉಪ್ಪನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟನ್ನು ಕಲೆಸಿಕೊಳ್ಳಿ. ಕಲೆಸಿದ ಹಿಟ್ಟನ್ನು ಹತ್ತು ನಿಮಿಷ ನೆನೆಯಲು ಬಿಡಿ.
- ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಬಿಸಿಯಾದಾಗ ಜೀರಿಗೆ ಮತ್ತು ಹಸಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
- ಸ್ವಲ್ಪ ಸಮಯದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಮಿಶ್ರಣಕ್ಕೆ ತುರಿದ ಮೂಲಂಗಿಯನ್ನು ಹಾಕಿ ಸಣ್ಣ ಉರಿಯಲ್ಲಿ 8-10 ನಿಮಿಷ ಬೇಯಿಸಿರಿ.
- ನಂತ್ರ ಅದಕ್ಕೆ ಉಪ್ಪು, ಚಾಟ್ ಮಸಾಲ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಹಾಕಿ ತಿರುಗಿಸಿ ಕೆಳಗಿಳಿಸಿ.
- ಕಲೆಸಿದ ಚಪಾತಿ ಹಿಟ್ಟಿನಿಂದ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಚಪಾತಿ ಲಟ್ಟಿಸಿ ಅದರ ಮಧ್ಯಕ್ಕೆ ಮೂಲಂಗಿ ಮಿಶ್ರಣದ ಉಂಡೆಯನ್ನಿಟ್ಟು ಮಡಚಿ ನಿಧಾನವಾಗಿ ಲಟ್ಟಿಸಿ. ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ ಎರಡೂ ಬೇಯಿಸಿದರೆ ಬಿಸಿಯಾದ ಮೂಲಂಗಿ ಪರೋಟ ಸವಿಯಲು ಸಿದ್ದ.
- ಉಪ್ಪಿನಕಾಯಿ, ಮೊಸರು ಅಥವಾ ಟೊಮ್ಯಾಟೊ ಸಾಸ್ ಜತೆ ಸವಿಯಿರಿ.