ಮೆಂತ್ಯ ದೋಸೆ ರೆಸಿಪಿ! | Janata news
ಬೆಂಗಳೂರು : ಸಾಮಗ್ರಿಗಳು:
ಅಕ್ಕಿ 1ಕಪ್
ಮೆಂತ್ಯ ಕಾಳು 1ಚಮಚ
ಗಟ್ಟಿ ಅವಲಕ್ಕಿ 1/2ಕಪ್
ಮೊಸರು 1/2ಕಪ್
ಹಸಿ ಕೊಬ್ಬರಿ ತುರಿ 4ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಎಣ್ಣೆ
ವಿಧಾನ
- ಮೊದಲಿಗೆ ಅಕ್ಕಿ ಮೆಂತ್ಯಕಾಳು ತೊಳೆದು 3ಗಂಟೆ ನೀರು ಹಾಕಿ ನೆನೆಯಿಡಿ.
- ನಂತರ ಹಿಟ್ಟು ರುಬ್ಬುವಕ್ಕಿಂತ 10 ನಿಮಿಷ ಮೊದಲು ಮೊಸರಿನಲ್ಲಿ ಅವಲಕ್ಕಿ ಹಾಕಿ ನೆನೆಸಿಡಿ.
- ನಂತರ ಮಿಕ್ಸಿಯಲ್ಲಿ ನೆನೆಸಿಟ್ಟ ಅಕ್ಕಿ ಮೆಂತ್ಯಕಾಳು ಹಾಕಿ ತುರಿದ ಹಸಿ ಕೊಬ್ಬರಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ತೆಗೆಯಿರಿ.
- ನಂತರ ನೆನೆಸಿಟ್ಟಿರ ಅವಲಕ್ಕಿ ನುಣ್ಣಗೆ ರುಬ್ಬಿ ಹಾಕಿ.
- ನಂತರ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಹುದುಗಲು ಬಿಡಿ.
- ಬೆಳಿಗ್ಗೆ ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಲೆ ಮೇಲೆ ದೋಸೆ ತವಾ ಇಟ್ಟು ಅದು ಕಾಯ್ದ ನಂತರ ಸ್ವಲ್ಪ ಎಣ್ಣೆ ಸವರಿ ಸ್ವಲ್ಪ ದಪ್ಪಗೆ ದೋಸೆ ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ನಿಮಿಷ ಬೇಯಿಸಿ ತೆಗೆಯಿರಿ.
ಕಾಯಿಚಟ್ನಿ :
ಮಿಕ್ಸಿಯಲ್ಲಿ ತೆಂಗಿನಕಾಯಿ ತುರಿ,
ಹುರಿಗಡಲೆ 2ಚಮಚ,
ಕಡಲೆ ಬೀಜ 2ಚಮಚ,
ಕೊತ್ತಂಬರಿ ಸೊಪ್ಪು ಸ್ವಲ್ಪ,
ಕರಿಬೇವು 5ಎಲೆ,
ಪುದಿನಾ ಸ್ವಲ್ಪ,
ಕೆಂಪು ಒಣಮೆಣಸಿನಕಾಯಿ 2,
ಬೆಳ್ಳುಳ್ಳಿ ಹಸಿಶುಂಠಿ ಸ್ವಲ್ಪ ,
ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರುಸೇರಿಸಿ ನುಣ್ಣಗೆ ರುಬ್ಬಿ ಚಟ್ನಿ ತಯಾರಿಸಿಕೊಳ್ಳಿ.
ನಂತರ 2ಚಮಚ ಎಣ್ಣೆಯಲ್ಲಿ ಸಾಸಿವೆ ಕರಿಬೇವು ಸ್ವಲ್ಪ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಕೊಡಿ.