ಟೊಮೊಟೊ ಮಸಾಲೆ ರೈಸ್ ಮಾಡಿ ನೋಡಿ .... | Janata news
ಬೆಂಗಳೂರು : ಬೇಕಾಗುವ ಸಾಮಗ್ರಿಗಳು:
5 ಟೊಮೊಟೊ
4 ಹಸಿಮೆಣಸಿನಕಾಯಿ
ಕರಿಬೇವಿನ ಸೊಪ್ಪು
ದಪ್ಪ ಈರುಳ್ಳಿ 2
ಕೊತ್ತಂಬರಿ ಸೊಪ್ಪು
ಎಣ್ಣೆ / ತುಪ್ಪ 8 ರಿಂದ 10 ಚಮಚ
ಸಾಸಿವೆ 1 ಚಮಚ
ಕಡಲೆ ಬೇಳೆ 1 ಚಮಚ
ಉದ್ದಿನ ಬೇಳೆ 1 ಚಮಚ
ಸಾರಿನ ಪುಡಿ 3 ಟೇಬಲ್ ಚಮಚ
ಅಚ್ಚ ಕಾರದ ಪುಡಿ ಅರ್ಧ ಚಮಚ
ಗರಂ ಮಸಾಲಾ ಅರ್ಧ ಚಮಚ
ಅರಿಶಿನ ಪುಡಿ ಅರ್ಧ ಚಮಚ
ನಿಂಬೆ ರಸ ಒಂದು ಟೇಬಲ್ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಕ್ಕಿ 1 ಬಟ್ಟಲು
ಮಾಡುವ ವಿಧಾನ:
ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿದ ಮೇಲೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬಂದ ನಂತರ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಹುರಿದ ಮೇಲೆ ಈರುಳ್ಳಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬಂದ ನಂತರ ಟೊಮೊಟೊ ಹಾಕಿ ಬೇಯುವವರೆಗೆ ಹುರಿಯಿರಿ.
ಬೆಂದ ನಂತರ ಸಾರಿನ ಪುಡಿ, ಗರಂ ಮಸಾಲ ಪುಡಿ, ಅಚ್ಚ ಕಾರದ ಪುಡಿ, ಅರಿಶಿನ ಪುಡಿ ಹಾಕಿ ಒಂದೆರಡು ನಿಮಿಷ ಬೆರೆಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಚೆನ್ನಾಗಿ ಬೆರೆಸಿ ಒಲೆಯನ್ನು ಆರಿಸಿ, ನಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಬೆರೆಸಿ. ಈಗ ಟೊಮೊಟೊ ಗೊಜ್ಜು ರೆಡಿ.
(ಇದನ್ನು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟುಕೊಂಡು ಬೇಕೆನಿಸಿದಾಗ ಉಪಯೋಗಿಸಬಹುದು.)
ಒಂದು ಕುಕ್ಕೇರ್ ನಲ್ಲಿ ಮಾಡಿಟ್ಟು ಕೊಂಡ ಗೊಜ್ಜನ್ನು ಹಾಗು ಅಕ್ಕಿ ಹಾಕಿ ಚೆನ್ನಾಗಿ ಕಲೆಸಿರಿ ನಂತ್ರ ಎರಡು ಕಪ್ ಅಷ್ಟು ನೀರನ್ನು ಹಾಕಿ ೨ವಿಸಲ್ ಮಾಡಿಸಿಕೊಳ್ಳಿ.
ತುಂಬಾ ಸುಲಭವಾಗಿ ಬೇಗ ಮಾಡಬಹುದಾದ ಟಮೋಟೋ ಮಸಾಲ ರೈಸ್ Ready to eat.